Sunday, August 1, 2021
Homeಸುದ್ದಿ ಜಾಲನೀವೇನು ಶಾಸಕರೋ ಅಥವಾ ಟೆರರಿಸ್ಟ್ ಗಳೋ: ಸುಮಲತಾ

ಇದೀಗ ಬಂದ ಸುದ್ದಿ

ನೀವೇನು ಶಾಸಕರೋ ಅಥವಾ ಟೆರರಿಸ್ಟ್ ಗಳೋ: ಸುಮಲತಾ

ಮಂಡ್ಯ: ಆಡಿಯೋ ಬಾಂಬ್ ಇದೆ, ಮಿಸೈಲ್ಸ್ ಇದೆ ಇಂತದ್ದೆಲ್ಲ ಹೇಳಿಕೆಗಳನ್ನು ಕೊಡುತ್ತಿರುವ ಜೆಡಿಎಸ್ ನಾಯಕರು ಶಾಸಕರಾ ಅಥವಾ ಟೆರರಿಸ್ಟ್ ಗಳಾ? ಎಂದು ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಜನಪ್ರತಿನಿಧಿಗಳಾಗಿ ತಮ್ಮ ಬಳಿ ಅಸ್ತ್ರಗಳಿವೆ, ಆಡಿಯೋ ಬಾಂಬ್ ಇದೆ, ಮಿಸೈಲ್ಸ್ ಇದೆ ಎಂದೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದೀರಲ್ಲ ನೀವೆಲ್ಲ ಶಾಸಕರೋ ಅಥವಾ ಟೆರರಿಸ್ಟ್ ಗಳೋ? ಜನಪರ ಕಾಳಜಿ ವಹಿಸುವವರು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡ ರಾಜಕಾರಣಿಗಳು ಆಡುವ ಮಾತೇ ಇದು ? ಮಹಿಳೆಯರ ಬಗ್ಗೆ ಗೌರವವಿಲ್ಲ, ಬಳಸುವ ಪದ ಪ್ರಯೋಗದ ಮೇಲೆ ಹಿಡಿತವಿಲ್ಲ ಇಂತವರನ್ನು ಹೇಗೆ ಸಮರ್ಥಿಸಿಕೊಳ್ಳುವುದು. ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳು ಜನರಿಗೆ ಅರ್ಥವಾಗಲ್ಲ ಎಂದುಕೊಳ್ಳಬೇಡಿ. ನಿಮ್ಮ ಹೇಳಿಕೆಗಳಿಗೆ ಮಂಡ್ಯದ ಜನರು ಹೆದರುವುದೂ ಇಲ್ಲ, ಸೊಪ್ಪು ಹಾಕಲ್ಲ ಎಂದು ತಿರುಗೇಟು ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img