Friday, July 23, 2021
Homeಕ್ರೈಂ ನ್ಯೂಸ್ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಇದೀಗ ಬಂದ ಸುದ್ದಿ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರು ; ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರೇಖಾ ಅವರೇ ಕದಿರೇಶ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂದು ಬಂಧಿತ ಆರೋಪಿ ಪೊಲೀಸರ ಎದರು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ರೇಖಾ ಕದಿರೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧ ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಪೀಟರ್ ಎನ್ನುವ ಆರೋಪಿ ರೇಖಾ ಕದಿರೇಶ್ ಅವರ ಹತ್ಯೆ ಪ್ರಕರಣಕ್ಕೆ ಕಾರಣ ಬಾಯಿಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

ಪೊಲೀಸರ ಎದುರು ವಿಚಾರಣೆ ವೇಳೆ ಪೀಟರ್, ಕದಿರೇಶ್ ಅವರನ್ನು ಕೊಲೆ ಮಾಡಿಸಿದ್ದು ರೇಖಾ, ರೇಖಾ ಅವರೇ ಕದಿರೇಶ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು. ಕದಿರೇಶ್ ಅವರ ಕೊಲೆ ಆರೋಪಿಗಳಿಗೆ ರೇಖಾ ಜಾಮೀನು ಕೊಡಿಸಿದ್ದರು. ಹೀಗಾಗಿ ರೇಖಾ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ ಎಂದು ಅರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img