Friday, July 23, 2021
Homeಸುದ್ದಿ ಜಾಲಆಂಧ್ರದಲ್ಲಿ 6 ಮಾವೋವಾದಿಗಳ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಇದೀಗ ಬಂದ ಸುದ್ದಿ

ಆಂಧ್ರದಲ್ಲಿ 6 ಮಾವೋವಾದಿಗಳ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ವಿಶಾಖಪಟ್ಟಣಂನಲ್ಲಿ ಇಂದು ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್ ಪೊಲೀಸ್​ ಪಡೆ ಹೊಡೆದುರುಳಿಸಿದೆ. ಇಂದು ಬೆಳಗ್ಗೆಯಿಂದಲೂ ಮಾವೋವಾದಿಗಳು ಮತ್ತು ಪೊಲೀಸ್​ ಸಿಬ್ಬಂದಿ ನಡುವೆ ಗುಂಡಿನ ವಿನಿಮಯ ನಡೆಯುತ್ತಿತ್ತು. ಈ ಎನ್​ಕೌಂಟರ್​​ನಲ್ಲಿ ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್​ ಪೊಲೀಸರು ಹತ್ಯೆಗೈದಿದ್ದಾರೆ ಎಂದು ವಿಶಾಖ ಗ್ರಾಮೀಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ಕೃಷ್ಣರಾವ್​ ತಿಳಿಸಿದ್ದಾರೆ.

ಆಯಂಟಿ ನಕ್ಸಲ್​ ವಿಶೇಷ ಪಡೆ ಗ್ರೇಹೌಂಡ್ಸ್​ ಪೊಲೀಸರು ಮತ್ತು ಸಿಪಿಐ (ಮಾವೋವಾದಿಗಳು) ಸಿಬ್ಬಂದಿ ನಡುವೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಾಂಪಾದಲ್ಲಿರುವ ಕೊಯಿರು ಸುತ್ತಲಿನ ಅರಣ್ಯಪ್ರದೇಶವಾದ ತೀಲಗಮೆಟ್ಟದಲ್ಲಿ ಬೆಳಗ್ಗೆ ಗುಂಡಿನಚಕಮಕಿ ನಡೆದಿತ್ತು. ಆರು ಮಂದಿ ಮೃತಪಟ್ಟವರಲ್ಲಿ ಮಹಿಳಾ ನಕ್ಸಲರೂ ಸೇರಿದ್ದಾರೆ. ಮೃತಪಟ್ಟವರ ಬಳಿಯಿದ್ದ ಒಂದು ಎಕೆ 47, ಮೂರು 303 ರೈಫಲ್ಸ್​, ಒಂದು ಎಸ್​ಎಲ್​ಆರ್​ ಸೇರಿ ಹಲವು ವಿಧದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷ್ಣರಾವ್​ ಮಾಹಿತಿ ನೀಡಿದ್ದಾರೆ.

ಪೊಲೀಸ್​ ಸಿಬ್ಬಂದಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಈ ಎನ್​ಕೌಂಟರ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಂದು ಸಂಜೆ ವೇಳೆಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗೆ ನಕ್ಸಲರ ಹಾವಳಿ ಜಾಸ್ತಿಯಾಗುತ್ತಿದೆ. ಛತ್ತೀಸ್​ಗಢ್​​ನಲ್ಲಂತೂ ನಕ್ಸಲರ ದಾಳಿಗೆ ಅದೆಷ್ಟೋ ಪೊಲೀಸರು ಜೀವಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಆಯಂಟಿ ನಕ್ಸಲ್​​ ಪಡೆಗಳು ತಮ್ಮ ಕಾರ್ಯವನ್ನು ಚುರುಕುಗೊಳಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img