Thursday, July 29, 2021
Homeಜಿಲ್ಲೆಉಡುಪಿಉಡುಪಿಯಲ್ಲೊಬ್ಬ ಮ್ಯಾಗ್ನೆಟಿಕ್ ಮ್ಯಾನ್: ದೇಹಕ್ಕೆ ಅಂಟಿಕೊಳ್ಳುತ್ತೆ ಲೋಹದ ವಸ್ತುಗಳು!

ಇದೀಗ ಬಂದ ಸುದ್ದಿ

ಉಡುಪಿಯಲ್ಲೊಬ್ಬ ಮ್ಯಾಗ್ನೆಟಿಕ್ ಮ್ಯಾನ್: ದೇಹಕ್ಕೆ ಅಂಟಿಕೊಳ್ಳುತ್ತೆ ಲೋಹದ ವಸ್ತುಗಳು!

ಉಡುಪಿ: ಉಡುಪಿಯಲ್ಲಿ ವ್ಯಕ್ತಿಯೊಬ್ಬರ ದೇಹದಲ್ಲಿ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿದ್ದು ಅಚ್ಚರಿಗೆ ಕಾರಣವಾಗಿದೆ. ಉಡುಪಿಯ ರಾಮ್ ದಾಸ್ ಶೇಟ್ ನಿನ್ನೆ ರಾತ್ರಿ ವಾಟ್ಸಾಪ್ ನಲ್ಲಿ ಬಂದ ವಿಡಿಯೋ ಒಂದನ್ನು ನೋಡಿ ತಾವೂ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಚ್ಚರಿ ಯೊಂದು ಅವರಿಗೆ ಕಾದಿತ್ತು! ಮನೆಯ. ಸ್ಪೂನ್ ,ಸವುಟು ,ಕಾಯಿನ್ ಇತ್ಯಾದಿ ವಸ್ತುಗಳನ್ನು ಅವರ ದೇಹ ಅಯಸ್ಕಾಂತದಂತೆ ಹಿಡಿದುಕೊಳ್ಳತೊಡಗಿದ್ದವು.

ಈ ವಿಷಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿ ವೈರಲ್ ಆಗಿತ್ತು. ಈ ಹಿಂದೆ ವ್ಯಕ್ತಿಯೊಬ್ಬರ ದೇಹದಲ್ಲಿ ಇಂತಹದ್ದೇ ಅಯಸ್ಕಾಂತೀಯ ಶಕ್ತಿ ಇದ್ದದ್ದು ಪತ್ತೆಯಾಗಿತ್ತು.

ಉಡುಪಿಯ ಪಿಪಿಸಿ ಕಾಲೇಜು ಸಮೀಪದ ನಿವಾಸಿಯಾದ ರಾಮ್ ದಾಸ್ ಶೇಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಕುತೂಹಲಕ್ಕೆ ಪರಿಶೀಲಿಸಿದಾಗ ಲೋಹದ ವಸ್ತುಗಳು ದೇಹಕ್ಕೆ ಅಂಟಿಕೊಳ್ಳುತ್ತಿವೆ ಎಂದಿದ್ದಾರೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img