Thursday, July 29, 2021
Homeಅಂತರ್ ರಾಷ್ಟ್ರೀಯಒಮ್ಮೆಗೇ 10 ಮಕ್ಕಳಿಗೆ ಜನ್ಮ ನೀಡಿದ್ಲಾ ಮಹಿಳೆ.? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ...

ಇದೀಗ ಬಂದ ಸುದ್ದಿ

ಒಮ್ಮೆಗೇ 10 ಮಕ್ಕಳಿಗೆ ಜನ್ಮ ನೀಡಿದ್ಲಾ ಮಹಿಳೆ.? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ!

37 ವರ್ಷದ ಮಹಿಳೆಯೊಬ್ಬರು ಒಮ್ಮೆಗೇ 10 ಮಕ್ಕಳಿಗೆ ಜನ್ಮವಿತ್ತ ಕಥೆಯೊಂದು ವೈರಲ್‌ ಆಗಿದ್ದು, ಈ ಸುದ್ದಿ ನಿಜವೇ ಎಂದು ನೆಟ್ಟಿಗರು ಖುದ್ದು ದಕ್ಷಿಣ ಆಫ್ರಿಕಾ ಸರ್ಕಾರವನ್ನು ವಿಚಾರಣೆ ಮಾಡಿದ್ದಾರೆ.

ಹತ್ತು ಮಕ್ಕಳಲ್ಲಿ ಏಳು ಗಂಡು ಹಾಗೂ ಮೂರು ಹೆಣ್ಣು ಎನ್ನಲಾಗಿದ್ದು, ಈ ಬಗ್ಗೆ ದಕ್ಷಿಣ ಆಫ್ರಿಕಾದ ಯಾವುದೇ ಆಸ್ಪತ್ರೆಯಲ್ಲೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪ್ರಿಟೋರಿಯಾದ ಆಸ್ಪತ್ರೆಯೊಂದರಲ್ಲಿ ಗೋಸಿಯೇಮ್ ಸಿಟ್ಹೋಲ್‌ 10 ಮಕ್ಕಳಿಗೆ ಜನ್ಮಕೊಟ್ಟ ಸುದ್ದಿ ಜಗತ್ತಿನೆಲ್ಲೆಡೆ ಹೆಡ್‌ಲೈನ್ ಆಗಿದ್ದು, ಇದರ ಸತ್ಯಾಸತ್ಯತೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಈ ಬಗ್ಗೆ ಖುದ್ದು ಸ್ಪಷ್ಟನೆ ಕೊಟ್ಟಿರುವ ಗೌಟೆಂಗ್ ಪ್ರಾಂತ್ಯದ ಪ್ರಾಂತೀಯ ಸರ್ಕಾರವು, ತಾನು ಈ ಕುರಿತಂತೆ ಆಳವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮಕೊಟ್ಟ ದಾಖಲೆಗಳಿಲ್ಲ ಎಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img