Thursday, July 29, 2021
Homeರಾಜ್ಯಶುಲ್ಕ ಕಟ್ಟಿಲ್ಲವೆಂದು 'ಆನ್ ಲೈನ್ ಕ್ಲಾಸ್' ಬಂದ್ ಮಾಡುವಂತಿಲ್ಲ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಇದೀಗ ಬಂದ ಸುದ್ದಿ

ಶುಲ್ಕ ಕಟ್ಟಿಲ್ಲವೆಂದು ‘ಆನ್ ಲೈನ್ ಕ್ಲಾಸ್’ ಬಂದ್ ಮಾಡುವಂತಿಲ್ಲ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು : ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಶಾಲಾ ಶುಲ್ಕವನ್ನು ಪಾವತಿಸಿಲ್ಲ ಎಂಬುದಾಗಿ ಹೇಳಿ, ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಬಂದ್ ಮಾಡುವಂತಿಲ್ಲ. ಒಂದು ವೇಳೆ ಬಂದ್ ಮಾಡಿದ ಬಗ್ಗೆ ದೂರು ಸಲ್ಲಿಕೆಯಾದ್ರೇ.. ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ರಾಜ್ಯ ಯಾವುದೇ ಶಾಲೆಗಳು ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿಲ್ಲ ಎಂಬುದಾಗಿ ಹೇಳಿ, ಆನ್ ಲೈನ್ ಕ್ಲಾಸ್ ಬಂದ್ ಮಾಡುವಂತಿಲ್ಲ. ಬಂದ ಮಾಡುವಂತ ಶಾಲೆಗಳ ವಿರುದ್ಧ ಕ್ರಮಕ್ಕೂ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಅಲ್ಲದೇ ಹೈಕೋರ್ಟ್, ಸುಪ್ರೀಂ ಕೋರ್ಟ್ ಸೂಚನೆ ಕೂಡ ಇದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಶಾಲೆಗಳು ಶಾಲಾ ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಬಂದ್ ಮಾಡಿದ್ದರ ಬಗ್ಗೆ ಪೋಷಕರು ದೂರು ನೀಡಬಹುದು. ನನಗೆ ಇಲ್ಲವೇ ನಿಮ್ಮ ಶಾಲಾ ವ್ಯಾಪ್ತಿಯ ಬಿಇಓಗಳಿಗೆ ದೂರು ನೀಡಿದ್ರೆ ಸಾಕು, ಅಂತಹ ಶಾಲೆಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img