Thursday, July 29, 2021
Homeಸುದ್ದಿ ಜಾಲ'ಆರೋಗ್ಯ ಇಲಾಖೆ'ಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

‘ಆರೋಗ್ಯ ಇಲಾಖೆ’ಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಕುರಿತಂತೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅವರ ಸಮಿತಿಯನ್ನು ರಚಿಸಿ, ಸರ್ಕಾರಕ್ಕೆ ವರಗದಿಯನ್ನು ಸಲ್ಲಿಸುವಂತೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದರು. ಇಂತಹ ವರದಿ ಸಲ್ಲಿಕೆಯ ನಂತ್ರವೂ ವರದಿಯು ಸಂಪುಟ ಸಭೆಯಲ್ಲಿ ಮಂಡನೆಯಾಗದೇ, ಸಮಿತಿಯ ಶಿಫಾರಸ್ಸುಗಳು ಜಾರಿಗೊಂಡಿರಲಿಲ್ಲ. ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮುಂಬರುವ ಕ್ಯಾಬಿನೇಟ್ ಸಭೆಯಲ್ಲಿ ಶ್ರೀನಿವಾಸಾಚಾರಿ ಸಮಿತಿಯ ವರದಿಯನ್ನು ಮಂಡಿಸುವಂತೆ ಸೂಚಿಸಿದ್ದಾರೆ. ಒಂದು ವೇಳೆ ಸಂಪುಟ ಸಭೆಯಲ್ಲಿ ಶ್ರೀನಿವಾಸಾಚಾರಿ ಸಮಿತಿಯ ವರದಿಯ ಜಾರಿಗೆ ಒಪ್ಪಿಗೆ ಸೂಚಿಸಿದ್ದೇ ಆದಲ್ಲಿ, ಸಮಿತಿಯ ಶಿಫಾರಸ್ಸುಗಳು ಜಾರಿಗೊಂಡು, ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ ದೊರೆಯಲಿದೆ.

ಈ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿರುವಂತ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಎಚ್. ಯಮೋಜಿ ಅವರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ದಿನಾಂಕ 12.06.2021 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ MLC ಆಯುನೂರು ಮಂಜುನಾಥ್ ಅವರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಪರಿಷ್ಕರಣೆ ಮಾಡಲು ರಚಿಸಿದ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿಯವರು ‘ಮಾನವ ಸಂಪನ್ಮೂಲ ನೀತಿ’ ಸಮಿತಿ ವರದಿಯನ್ನು ಅನುಷ್ಠಾನ ಮಾಡಲು ಮನವಿ ಸಲ್ಲಿಸುತ್ತ ಮಾತನಾಡಿ, ಕೋರೋನಾದ (COVID-19) ಸಂಕಷ್ಟ ಸಮಯದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಅತ್ಯಂತ ಕಡಿಮೆ ವೇತನದಲ್ಲಿ ಮತ್ತು ಯಾವುದೇ ಭದ್ರತೆ ಇಲ್ಲದಿದ್ದರೂ, ಜನಾನುರಾಗಿ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಜೀವನದ ಹಂಗನ್ನು ತೊರೆದು ರಾಜ್ಯದ ಜನರಿಗೆ ಮತ್ತು ಸಮಾಜಕ್ಕೆ ಆದರ್ಶವಾಗಿ ಉತ್ತಮ ಸೇವೆ ನೀಡುತ್ತಿದ್ದಾರೆ. ಸರಕಾರ ಕೂಡಲೇ ನಿವೃತ್ತ IAS ಅಧಿಕಾರಿ ಶ್ರೀನಿವಾಸಾಚಾರಿ ಇವರ ನೇತೃತ್ವದಲ್ಲಿ ಸಲ್ಲಿಸಿದ ವರದಿಗೆ 5-6 ತಿಂಗಳು ಕಳೆದರೂ ಜಾರಿ ಆಗಿರುವುದಿಲ್ಲ. ಕೂಡಲೇ ಈ ವರದಿಯನ್ನು ಜಾರಿ ಮಾಡಿ ನೌಕರರು ಆತ್ಮಸ್ಥರ್ಯದಿಂದ ಕೆಲಸ ಮಾಡಲು ಅನುಕೂಲ ಮಾಡಿ ಕೊಡಬೇಕಾಗಿ ವಿನಂತಿಸಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಸಮಿತಿ ವರದಿಯ ಕಡತವನ್ನು ಕ್ಯಾಬಿನೆಟ್’ ಗೆ ಮಂಡಿಸಲು ಆರೋಗ್ಯ ಸಚಿವರಿಗೆ ಹಾಗೂ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

ಕೋವಿಡ್ -19 ರೂಪಾಂತರ ವಿಷಮ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮಧ್ಯೆ ತಾರತಮ್ಯ ಸಲ್ಲದು ಹಾಗಾಗಿ COVID RISK INCENTIVE ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ನೀಡಲು ಒತ್ತಾಯಿಸಲಾಯಿತು. ಅದರಂತೆ ಕೊರೋನ (COVID-19) ಸಂದರ್ಭದಲ್ಲಿ ಮೃತರಾದ ಎಲ್ಲಾ ನೌಕರರ ಕುಟುಂಬಕ್ಕೆ ಪರಿಹಾರವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಆಯನೂರು ಮಂಜುನಾಥ್ ರವರ ನೇತೃತ್ವದಲ್ಲಿ, ಸಂಘದ ರಾಜ್ಯ ಕಾರ್ಯದರ್ಶಿ ರುದ್ರೇಶ್, ಶಿವಮೊಗ್ಗ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ. ರಾಘವೇಂದ್ರ ಶಿಲ್ಪಿ, ಜಿಲ್ಲಾ ಉಪಾಧ್ಯಕ್ಷರಾದ ಶಂಕರಪ್ಪ ಗ ಅಳಗವಾಡಿ, ನವೀನ್ ಮತ್ತು ಇತರೆ ಸಂಘದ ಪ್ರಮುಖ ಪದಾಧಿಕಾರಿಗಳ ಮುಖೇನ ಮನವಿ ಸಲ್ಲಿಸಲಾಯಿತು.

ಭಾರತೀಯ ಮಜ್ದೂರ್ ಸಂಘ, ಶಾಸಕರಾದ ಹಾಗೂ ಸಂಘದ ಗೌರವಾಧ್ಯಕ್ಷರಾದ ಆಯನೂರು ಮಂಜುನಾಥ್ ರವರ ಘನ ಮಾರ್ಗದರ್ಶನದಲ್ಲಿ ಸತತ ಪರಿಶ್ರಮ, ತಾಳ್ಮೆ ಹಾಗೂ ಜವಾಬ್ದಾರಿಯುತ ನಡವಳಿಕೆಯಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಧ್ವನಿಯಾಗಿ ನಿರ್ಣಾಯಕ ಹಂತ ತಲುಪಿದ್ದೇವೆ.

ವೇತನ ಪರಿಷ್ಕರಣೆ, ಸೇವಾ ಭಧ್ರತೆಯೊಂದಿಗೆ ಸರ್ಕಾರ ರಚಿಸಿದ ಸಮೀತಿಯ ಶಿಫಾರಸ್ಸು ಈಡೇರಿಸಲು ಸನ್ಮಾನ್ಯ ಮುಖ್ಯಮಂತ್ರಿಗಳ ಸ್ಪಂದನೆ ನೌಕರರ ಸೇವೆಗೆ ನೀಡಿದ ಗೌರವವಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ತಿಳಿಸಿದ್ದಾರೆ.

ಅದರಂತೆ ಆರೋಗ್ಯ ಸಚಿವರು ಸಹ ಸಕಾರಾತ್ಮಕವಾಗಿ ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಶೀಘ್ರವೇ 15 ದಿನದೊಳಗಾಗಿ ಕ್ಯಾಬಿನೆಟ್” ಗೆ ಮಂಡಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಏಪ್ರಿಲ್ ತಿಂಗಳಲ್ಲಿ ನಡೆದ ಸಂಘದ ಸಮಾವೇಶದಲ್ಲಿ ಸಮಿತಿ ವರದಿಯ ಅನುಷ್ಠಾನದ ಭರವಸೆಯಂತೆ ಕಾರ್ಯೋನ್ಮುಖವಾದ ನಡೆಯು ಸಂತೋಷದ ವಿಷಯ. ಸದರಿ ನೌಕರರ ಬೇಡಿಕೆಗಳನ್ನು ಈಡೇರಿಸಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿಷಯವಾಗಿ ರಾಷ್ಟ್ರದಲ್ಲೇ ಮಾದರಿಯಾಗಬೇಕೆಂದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿರವರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img