Thursday, July 29, 2021
Homeಸುದ್ದಿ ಜಾಲಜೀವಜಲ ಯೋಜನೆಯ 30 ಲಕ್ಷ ರೂ ಕಾಮಗಾರಿಗೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ

ಇದೀಗ ಬಂದ ಸುದ್ದಿ

ಜೀವಜಲ ಯೋಜನೆಯ 30 ಲಕ್ಷ ರೂ ಕಾಮಗಾರಿಗೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ

ಬೇಲೂರು : ತಾಲ್ಲೂಕು ಜಾವಗಲ್ ಹೋಬಳಿಯ ಬಂದೂರು ಗ್ರಾ ಪಂ ವ್ಯಾಪ್ತಿಯ ಧನಂಜಯಪುರ ಗ್ರಾಮದ ಕುಡಿಯುವ ನೀರನ್ನು ಮನೆಮನೆಗೆ ತಲುಪಿಸುವ ಜಲ ಜೀವನ್ ಮಿಷಿನ್ ಜೀವಜಲ ಯೋಜನೆಯ 30 ಲಕ್ಷ ರೂ ಕಾಮಗಾರಿಗೆ ಮಾನ್ಯ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ ನೀಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇಂತಹ ಯೋಜನೆಗಳು ಪ್ರತಿ ಹಳ್ಳಿ ಹಳ್ಳಿಗೆ ಬರಲು ಮಾನ್ಯ ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಪಕ್ಕದ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಕಾರಣ ಈಡಿ ತಾಲ್ಲೂಕಿನ ಕುಡಿಯುವ ನೀರು ಹಾಗೂ ಕೆರೆಗೆ ನೀರು ಹರಿಯುವ ಕಾಮಗಾರಿಗಳು ಪ್ರಗತಿಯಲ್ಲಿವೆ ಅಂದರೆ ಅದಕ್ಕೆ ಮೂಲ ಕಾರಣ ಶಿವಲಿಂಗೇಗೌಡ್ರು

ಸರ್ಕಾರ ನಮ್ಮ ಕೆಲವು ಯೋಜನೆಗಳಿಗೆ  ಕರೋನಾ ಕಾರಣ ಹೇಳಿ ತಡೆನೀಡಿತ್ತು ಮುಖ್ಯಮಂತ್ರಿಗಳಿಗೆ ದೇವೆಗೌಡ್ರು ಪತ್ರ ವ್ಯವಹಾರ ನಡೆಸಿದ ಸಂದರ್ಭದಲ್ಲಿ ಸ್ಪಂದಿಸಿದ ಮುಖ್ಯ ಮಂತ್ರಿಗಳು ಸಹಕಾರ ನೀಡಿದ್ದಾರೆ, ಅಲ್ಲದೆ ಮುಂದಿನ ದಿನಗಳಲ್ಲಿ

ಎತ್ತಿನಹೊಳೆ ಯೋಜನೆಯಿಂದ 30 ಲಕ್ಷದಿಂದ ರಸ್ತೆ ಒಳಚರಂಡಿ, ಕರಿಯಮ್ಮ ದೇವಾಲದ ಜೀರ್ಣೋದ್ಧಾರಕ್ಕೆ 2 ಲಕ್ಷ, ಹರಿಹರೇಶ್ವರ ದೇವಾಲಯದ ಪಕ್ಕ ಸಮುದಾಯ  ಭವನ ನಿರ್ಮಿಸಲು ಸಂಸದರ ನಿಧಿಯಿಂದ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು

ಈ ಸಂದರ್ಭದಲ್ಲಿ ಮಾಜಿ ತಾ. ಪಂ ಸದಸ್ಯರಾದ ಜೆ ಕೆ ಸಿದ್ದೇಗೌಡ, ಗ್ರಾ ಪಂ ಅಧ್ಯಕ್ಷರಾದ ವಿಶ್ವನಾಥ್ ಗ್ರಾ ಪಂ ಸದಸ್ಯರಾದ ಮೂರ್ತಿ ಗ್ರಾಮಸ್ಥರಾದ ಯತೀಂದ್ರ, ಮರಿಗೌಡ್ರು,ಗಿಡ್ಡೇಗೌಡ್ರು, ಮಹಲಿಂಗಪ್ಪ, ಜೆ ಜಿ ತಿಮ್ಮೇಗೌಡ್ರು, ಗುತ್ತಿಗೆದಾರ ಯೋಗೇಶ್ ,ಮತ್ತಿತರರು ಉಪಸ್ಥಿತಿಯಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img