Thursday, July 29, 2021
Homeರಾಜ್ಯ'KSRTC' ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್

ಇದೀಗ ಬಂದ ಸುದ್ದಿ

‘KSRTC’ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆ ಲಾಕ್ ಡೌನ್ ಹೇರಲಾಗಿದ್ದು, ಬಸ್ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ಸರ್ಕಾರಿ ರಾಜ್ಯ ಸಾರಿಗೆ ಸಂಸ್ಥೆಗೆ ಭಾರೀ ನಷ್ಟವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಬಸ್ ಪ್ರಯಾಣದ ದರವನ್ನ ಏರಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಬಸ್ ಓಡಿಸದೇ ಇದ್ದರೆ ಪ್ರತಿನಿತ್ಯ ನಮಗೆ 20 ಕೋಟಿ ನಷ್ಟ ಉಂಟಾಗುತ್ತದೆ. ಒಂದು ತಿಂಗಳು ಬಸ್ ನಿಂತರೆ ನಮಗೆ 500-600 ಕೋಟಿ ನಷ್ಟವಾಗುತ್ತದೆ ಎಂದಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ನಾವು ಬಸ್ ಸಂಚಾರ ಮಾಡಲಿಲ್ಲ, ಮುಂದಿನ ವಾರ ಕೂಡ ಸಂಚಾರ ಇರಲ್ಲ, ಮುಂದೆ ಸರ್ಕಾರದ ಸೂಚನೆಯಂತೆ ಹಂತ ಹಂತವಾಗಿ ಸಾರಿಗೆ ಸಂಚಾರ ಆರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ನಮಗೆ ಆಗಿರುವ ನಷ್ಟದ ಪ್ರಮಾಣವನ್ನು ನೋಡಿದರೆ ಶೇ.50 ರಷ್ಟು ದರ ಏರಿಕೆ ಆಗಬೇಕು, ಆದರೆ ಅಷ್ಟು ಮಾಡುವುದಕ್ಕೆ ಆಗುವುದಿಲ್ಲ, ಶೇ10-15 ರಷ್ಟು ಪ್ರಯಾಣ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಅಂದುಕೊಂಡಿದ್ದೇವೆ, ಅದು ಈಗ ಸರ್ಕಾರದ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img