Sunday, June 13, 2021
Homeಗೋಕಾಕಅಪ್ರಾಪ್ತ ಬಾಲಕಿಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ವೈರಲ್ : ಬಾಲಕಿ...

ಇದೀಗ ಬಂದ ಸುದ್ದಿ

ಅಪ್ರಾಪ್ತ ಬಾಲಕಿಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ವೈರಲ್ : ಬಾಲಕಿ ಶವದ ರೂಪದಲ್ಲಿ ಪತ್ತೆ , ಸಾವಿನ ಸುತ್ತ ಅನುಮಾನದ ಹುತ್ತ

ಗೋಕಾಕ :  ಮೇ. 23ರಂದು ಮೂಡಲಗಿ  ಪಟ್ಟಣದ ಶ್ರೀಕಾಂತ ಶಂಕರ ನಾಯಕ  ಎಂಬಾತ ಅಪ್ರಾಪ್ತೆ ಬಾಲಕಿಯ ಜೊತೆ  ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕ ಹಿಂಡಲಗಾ ಜೈಲ ಪಾಲಗಿ 15 ದಿನಗಳ ಕಳೆಯುವ ಮುಂಚೆಯೇ ಆ ಅಪ್ರಾಪ್ತೆ ಸಾವನ್ನಪ್ಪಿದ್ದಾಳೆ.

ಶೃತಿ ಸದಾಶಿವು  ಸತರಡ್ಡಿ ಎಂಬುವಳು ಮೃತ ದುರ್ದೈವಿ, ಇವಳು ಗುರುವಾರ ರಾತ್ರಿ ಮನೆಯಿಂದ ಹೊರಗೆ ಹೋಗಿ ಸಾವನ್ನಪ್ಪಿದ್ದಾಳೆ ಎಂಬ ಮಾತು ಪಟ್ಟಣದಲ್ಲಿ ಹರಿದಾಡುತ್ತಿರುವ ಹಿನ್ನಲೆ ಪೊಲೀಸ್ ಅಧಿಕಾರಿಗಳು ಕೆಲವು ಸ್ಥಳಗಲ್ಲಿ ಪರಿಶೀಲನೆ ನಡೆಸಿದರು.

ಆದರೆ ಅವಳ ಶವವು ಇಂದು ಬೆಳಗ್ಗೆ (ಶುಕ್ರವಾರ) ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಸುಣಧೋಳಿ ಸೇತುವೆ ಬಳಿ ಪತ್ತೆಯಾಗಿದೆ.

ಸಾವಿನ ಸುತ್ತ ಅನುಮಾನದ ಹುತ್ತ : ಅಪ್ರಾಪ್ತೆ ಸಾವಿಗೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣಕ್ಕೋ ಇಲ್ಲ ಬೇರೆ ಯಾರಾದ್ರೂ ಕೊಲೆ ಮಾಡಿರಬಹುದಾ ಎಂಬ ಅನುಮಾನಗಳಿಂದ ಈ ಸಾವಿಗೆ ಕಾರಣ ಆತ್ಮಹತ್ಯೆಯೋ ಕೊಲೆಯೂ ಎಂಬ ಅನುಮಗಳು ಹುಟ್ಟಿಕೊಡಿವೆ

ಈ ಪ್ರಕರಣ ಕುಲಗೋಡ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.ತನಿಖೆಯ ಬಳಿಕವೇ ಸತ್ಯಾಸತ್ಯತೆಗಳು ಬೆಳಕಿಗೆ ಬರುತ್ತೆ.

ಮೇ23 ರಂದು ವಿಡಿಯೋ ವೈರಲ್ ಆರೋಪಿ ಬಂಧನ :  ಬಾಲಕಿಯ ಜೊತೆಯಲ್ಲಿ ಎರಡು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಪಟ್ಟಣದ ಶ್ರೀಕಾಂತ ಶಂಕರ  ನಾಯಕ ಎಂಬಾತ ಮತ್ತೆ ದೈಹಿಕ ಸಂಪರ್ಕ ಹೊಂದಲು ಬಾಲಕಿಯನ್ನು ಕರೆದೊಯ್ಯಲು ಅವಳು  ತಿರಸ್ಕರಿಸಿದ್ದರಿಂದ ಅವಳಿಗೆ ಬಡೆದು ಜೀವಬೆದರಿಕೆ ಹಾಕಿದ್ದಾನೆ.

ನಂತರ ಬಾಲಕಿಯರ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ ಯುವಕ. ಈ ವಿಷಯ ತಿಳಿದ ಬಾಲಕಿಯ ಮನೆಯವರು ಹಾಗೂ ಬಾಲಕಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

ಮನೋಹರ ಮೇಗೇರಿ

ವಿ ನ್ಯೂಸ್ ಕನ್ನಡ.

ಗೋಕಾಕ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img