Tuesday, June 15, 2021
Homeಜಿಲ್ಲೆಬಾಗಲಕೋಟೆಬಾಗಲಕೋಟೆ : ಮುಸ್ಲಿಂ ಧರ್ಮ ಪ್ರಚಾರಕ ‘ಹಜರತ್ ಮೊಹಮ್ಮದ್ ನೂರುಲ್ಲಾಹ ಚಿಸ್ತಿ’ ಅಸ್ತಂಗತ

ಇದೀಗ ಬಂದ ಸುದ್ದಿ

ಬಾಗಲಕೋಟೆ : ಮುಸ್ಲಿಂ ಧರ್ಮ ಪ್ರಚಾರಕ ‘ಹಜರತ್ ಮೊಹಮ್ಮದ್ ನೂರುಲ್ಲಾಹ ಚಿಸ್ತಿ’ ಅಸ್ತಂಗತ

ಬಾಗಲಕೋಟೆ :  ಜಿಲ್ಲೆಯ ಬನಹಟ್ಟಿಯ ಹಜರತ್ ಮೊಹಮ್ಮದ್ ನೂರುಲ್ಲಾಹ ಚಿಸ್ತಿ ಮಿರ್ಜಾಯಿ ದರ್ಗಾದ ರುವಾರಿ ಮೊಹಮ್ಮದ್ ನೂರುಲ್ಲಾ ಚಿಸ್ತಿ(೭೫) ಬುಧವಾರ ವಯೋಸಹಜದಿಂದ ಅಸ್ತಂಗತರಾದರು.

ಇವರು ಮೂಲತಃ ಹೈದರಾಬಾದ್‌ನ ನಿಜಾಮ ಕುಟುಂಬದವರಾಗಿದ್ದು, ಕಳೆದೊಂದು ಶತಮಾನದಿಂದ ಚಿಸ್ತಿ ಕುಟುಂಬವು ಕರ್ನಾಟಕ, ಆಂಧ್ರ ಹಾಗು ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಇಸ್ಲಾಂ ಧರ್ಮ ಪ್ರಚಾರ, ಮಸೀದಿ ಹಾಗು ಮದರಸಾಗಳನ್ನು ಸ್ಥಾಪಿಸುವ ಮೂಲಕ ಸಾಕಷ್ಟು ಸಹಾಯ-ಸಹಕಾರದಲ್ಲಿ ಪಾಲ್ಗೊಂಡವರಾಗಿದ್ದಾರೆ.

ಮೃತರಾದ ಮೊಹಮ್ಮದ್ ನೂರುಲ್ಲಾ ಚಿಸ್ತಿಯವರ ಅಜ್ಜ ಮಿರ್ಜಾ ಮೊಹಮ್ಮದ್ ಬೇಗಸಾಬ್ ಶತಮಾನದ ಹಿಂದೆ ಬನಹಟ್ಟಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪ್ರಥಮ ಬಾರಿ ಜಾಮಿಯಾ ಮಸೀದಿ ಹಾಗು ಮದರಸಾವನ್ನು ಸ್ಥಾಪಿಸಿದ ಗರಿಮೆಯಾಗಿ, ಅವುಗಳನ್ನು ಇಂದಿಗೂ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇಸ್ಲಾಂ `ಧರ್ಮ ಜಾಗೃತಿ’ಗೆ ಅನೇಕ ಕಾರ್ಯಗಳನ್ನು ನಡೆಸುತ್ತ ಕಡುಬಡವರಿಗೆ ಪ್ರತಿ ವರ್ಷ ರಂಜಾನ್ ಸಂದರ್ಭ ಕಡುಬಡವರಿಗೆ ಅನೇಕ ರೀತಿ ಸಹಾಯ ಮಾಡುವದಲ್ಲದೆ ಕುರಾನ್ ಶಿಕ್ಷಣ ಬಗ್ಗೆ ಇಂದಿಗೂ ಒತ್ತು ನೀಡುವಲ್ಲಿ ಕಾರಣರಾಗಿದ್ದರು.

ಕಳೆದ ಬುಧವಾರ ಹೈದ್ರಾಬಾದ್‌ನಲ್ಲಿ ನಿಧನರಾದ ಇವರನ್ನು ಬನಹಟ್ಟಿಯ ಅವರ ಸ್ವಂತ ದರ್ಗಾದಲ್ಲಿ ತಡರಾತ್ರಿ ೧೧:೩೦ ಕ್ಕೆ ಅಂತ್ಯ ಸಂಸ್ಕಾರ ಮಾಡಲಾಯಿತು.

ಪ್ರಕಾಶ ಕುಂಬಾರ

 ವಿ ನ್ಯೂಸ್ 24 ಕನ್ನಡ

ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img