Tuesday, June 15, 2021
Homeಸುದ್ದಿ ಜಾಲಹಾಸನ : ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ...

ಇದೀಗ ಬಂದ ಸುದ್ದಿ

ಹಾಸನ : ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ

ಹಾಸನ :ಕೇಂದ್ರ ಸರ್ಕಾರವು ಡೀಸೆಲ್ , ಪೆಟ್ರೋಲ್  ಬೆಲೆ ರೂ 100/-ನಾಟ್ ಔಟ್  ಮಾಡಿರುವುದನ್ನು ಮತ್ತು ಗ್ಯಾಸ್ ದರ ಹೆಚ್ಚಳ ಮಾಡಿರುವುದನ್ನು ವಿರೋದಿಸಿ ಕೆ ಪಿ ಸಿ ಸಿ ಅದ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಸೂಚನೆ ಮೇರೆಗೆ ಈ ದಿನ ಹಾಸನದಲ್ಲಿ   ಕಾಂಗ್ರೆಸ್ ಪಕ್ಷದ ವತಿಯಿಂದ  ಬಿ ಎಂ ರಸ್ತೆ ಜೈಲ್ ಮುಂಬಾಗವಿರುವ ವೆಂಕಟಾದ್ರಿ ಪೆಟ್ರೋಲ್  ಬಂಕ್  ಎದುರು   ಕಾಂಗ್ರೆಸ್ ಮುಖಂಡ ಮತ್ತು ಜಿಲ್ಲಾ ವಕೀಲರ ಸಂಘದ ಮಾಜಿ ಅದ್ಯಕ್ಷ ರಾದ ದೇವರಾಜೇಗೌಡರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವರಾಜೇಗೌಡರು ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ   ಕೂಡಲೇ ಪೆಟ್ರೋಲ್ ಡೀಸೆಲ್ ದರವನ್ನು ಕಡಿಮೆ ಮಾಡಬೇಕೆಂದು    ತಪ್ಪಿದಲ್ಲಿ ಕೇಂದ್ರದ ವಿರುದ್ದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

 ಅಲ್ಲದೆ ರೈತರ,ಬಡವರ್ಗದ ಜನತೆ,ಕೂಲಿ ಕಾರ್ಮಿಕರು, ಶ್ರಮಿಕ ವರ್ಗ, ದೀನ ದಲಿತರು ಆಟೋ ಚಾಲಕರಿಗೆಮತ್ತು ಇತರೆ ವರ್ಗದ ಮೇಲೆ ಆಗಿರುವ ಆರ್ಥಿಕ ಸಂಕಸ್ಠವನ್ನು  ದೂರಮಾಡ ಬೇಕೆಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ  ರಂಗೇಗೌಡ, ಶಿವಕುಮಾರ್, ರವಿಕುಮಾರ್,ಕಾಂತರಾಜ್, ಅಶೋಕ , ರವಿ ,ಜಯರಾಮ್, ಆದಿಲ್, ಫಾಜಿಲ್ , ಫರಾನ್,  ಮುಂತಾದವರು ಬಾಗವಹಿಸಿದ್ದರು.

  ಪ್ರಸನ್ನಕುಮಾರ್ ಅಂಕಿಹಳ್ಳಿ

ವಿ ನ್ಯೂಸ್ 24ಕನ್ನಡ

ಹಾಸನ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img