Tuesday, June 15, 2021
Homeದೆಹಲಿಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ಇದೀಗ ಬಂದ ಸುದ್ದಿ

ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಭತ್ತ, ರಾಗಿ, ಜೋಳ ಸೇರಿದಂತೆ 12 ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭತ್ತ, ರಾಗಿ ಜೋಳ ಸೇರಿದಂತೆ 12 ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದ ಕೋಟ್ಯಾಂತರ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ಭತ್ತಕ್ಕೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 72 ರೂ. ಏರಿಕೆ ಮಾಡಲಾಗಿದೆ. ಹಾಗೆಯೇ ಪ್ರತಿ ಕ್ವಿಂಟಲ್ ರಾಗಿಗೆ 82 ರೂ. ತೊಗರಿ ಹಾಗೂ ಉದ್ದಿನ ಬೆಳೆಗೆ 300 ರೂ. ಏರಿಕೆ ಮಾಡಲಾಗಿದೆ.

ಭತ್ತ 72 ರೂ.

ಬಾಜ್ರಾ 72 ರೂ.

ರಾಗಿ 82 ರೂ,

ಮೆಕ್ಕೆಜೋಳ 20 ರೂ.

ತೊಗರಿ 300 ರೂ.

ಹೆಸರು 79 ರೂ.

ಉದ್ದು 300 ರೂ.

ಹತ್ತಿ (ಮಧ್ಯಮ) 211 ರೂ, ಹತ್ತಿ (ಉದ್ದ) 200 ರೂ.

ಸೂರ್ಯಕಾಂತಿ 130 ರೂ.

ನೈಗರ್ ಸೀಡ್ 235 ರೂ.

ಸೋಯಬೀನ್ 70 ರೂ.

ಶೇಂಗಾ 275 ರೂ. ರೂ. ಏರಿಕೆ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img