Tuesday, June 15, 2021
Homeಜಿಲ್ಲೆಬೆಂಗಳೂರು ಗ್ರಾಮಾಂತರಸಿಂಗೇನಾ ಅಗ್ರಹಾರ ಮಾರುಕಟ್ಟೆಯಲ್ಲಿ ವರ್ತಕರು ಹಾಗೂ ಕೆಲಸಗಾರರಿಗೆ ವ್ಯಾಕ್ಸಿನೇಷನ್

ಇದೀಗ ಬಂದ ಸುದ್ದಿ

ಸಿಂಗೇನಾ ಅಗ್ರಹಾರ ಮಾರುಕಟ್ಟೆಯಲ್ಲಿ ವರ್ತಕರು ಹಾಗೂ ಕೆಲಸಗಾರರಿಗೆ ವ್ಯಾಕ್ಸಿನೇಷನ್

ಆನೇಕಲ್: ರಾಜ್ಯ ಸರ್ಕಾರ 14 ನೇ ತಾರೀಖಿನ ನಂತರ ಲಾಕ್ ಡೌನ್ ಸಮಯವನ್ನ ಮುಂಜಾನೆ 6 ರಿಂದ 2 ಗಂಟೆಯವರೆಗೆ ವಿಸ್ತರಣೆ ಮಾಡಿದ್ದು, ರೈತರು ಹಾಗೂ ವರ್ತಕರಿಗೆ ಕೊಂಚ ಮಟ್ಟಿಗೆ ನೆಮ್ಮದಿ ತಂದಿದೆ. ಇನ್ನೂ ಹೆಚ್ಚಿನ ಸಮಯ ನೀಡಿದಾಗ ರೈತರಿಗೂ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದ್ದಾರೆ.

ಹೌದು ರಾಜ್ಯದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಹುಸ್ಕೂರಿನ ಸಿಂಗೇನಾ ಅಗ್ರಹಾರ ಮಾರುಕಟ್ಟೆಯ ವರ್ತಕರಿಗೆ ಹಾಗೂ ಕಾರ್ಮಿಕರಿಗೆ ಇಂದು ವ್ಯಾಕ್ಸಿನೇಷನ್‌ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ಚಾಲನೆ ನೀಡಿದರು.

ಬೆಂಗಳೂರಿನ ಹುಸ್ಕೂರು ಸಮೀಪದ ಸಿಂಗೇನಾ ಅಗ್ರಹಾರ ಎಪಿಎಂಸಿ ಹಣ್ಣಿನ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಗೆ ಪ್ರತಿದಿನ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಜನ ರೈತರು, ವ್ಯಾಪಾರಸ್ಥರು, ಹಮಾಲಿಗಳು ಹಾಗೂ ಕೂಲಿ ಕಾರ್ಮಿಕರು ಇಲ್ಲಿಗೆ ಆಗಮಿಸುವುದರಿಂದ ಮಾರುಕಟ್ಟೆಯಲ್ಲಿ ಪ್ರತಿದಿನ ಹೆಚ್ಚು ಜನ ಒಂದೆಡೆ ಸೇರುತ್ತಾರೆ. ಈಗಾಗಿ ಕೊರೊನಾ ಸೋಂಕು ಹರಡುವ ಜೀವ ಭಯದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಮನಗೊಂಡ ವರ್ತಕರು ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿಯನ್ನ ಮಾಡಿಕೊಂಡಿದ್ದು, ಇದರ ಪ್ರತಿಫಲವಾಗಿ ಇಂದು ಮಾರುಕಟ್ಟೆಯಲ್ಲಿನ ಸುಮಾರು ಎರಡು ಸಾವಿರ ಜನರಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇನ್ನೂ ಕೊರೊನಾ ಲಾಕ್ ಡೌನ್ ನಿಂದ ವ್ಯಾಪಾರಗಳಿಲ್ಲದೆ ವರ್ತಕರು ಸಮಸ್ಯೆ ಎದುರಿಸುತ್ತಿದ್ದು, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದರು.

ರಾಜ್ಯ ಸರ್ಕಾರ 14 ನೇ ತಾರೀಖಿನ ನಂತರ ಲಾಕ್ ಡೌನ್ ಸಮಯವನ್ನ ಮುಂಜಾನೆ 6 ರಿಂದ 2 ಗಂಟೆಯ ವರೆಗೆ ವಿಸ್ತರಣೆ ಮಾಡಿರುವುದು ರೈತರು, ವರ್ತಕರು ಹಾಗೂ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಸಾವಿರಾರು ಜನ ಕೊಂಚ ಸಂಕಷ್ಟದಿಂದ ಹೊರಬಂದತಾಗಿದೆ ಇನ್ನೂ ಹೆಚ್ಚಿನ ಸಮಯವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಎಪಿಎಂಸಿ ಮಾರುಕಟ್ಟೆಯ ವರ್ತಕ ನಾಗರಾಜು ಮನವಿಯನ್ನ ಮಾಡಿಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img