Tuesday, June 15, 2021
Homeಸುದ್ದಿ ಜಾಲಇಂಟರ್ನೆಟ್ ಇಲ್ಲದವರಿಗೂ ಲಸಿಕೆ ಪಡೆಯಲು ಹಕ್ಕಿದೆ, ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಇರಲಿ: ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ಇಂಟರ್ನೆಟ್ ಇಲ್ಲದವರಿಗೂ ಲಸಿಕೆ ಪಡೆಯಲು ಹಕ್ಕಿದೆ, ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಇರಲಿ: ರಾಹುಲ್ ಗಾಂಧಿ

ನವದೆಹಲಿ: ನೋಂದಣಿ ಮಾಡದಿದ್ದರೂ ಕೋವಿಡ್ -19 ವ್ಯಾಕ್ಸಿನೇಷನ್ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.

ಇಂಟರ್ನೆಟ್ ಬಳಸದವರಿಗೂ ಬದುಕುವ ಹಕ್ಕಿದೆ. ಹೀಗಾಗಿ ಲಸಿಕೆಗಾಗಿ ನೋಂದಣಿ ಮಾಡದಿದ್ದವರಿಗೂ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಡಿಜಿಟಲ್ ಬಳಕೆ ಅಥವಾ ಸ್ಮಾರ್ಟ್ ಫೋನ್ ಇಲ್ಲದ ಬಡವರಿಗೆ, ವಿಶೇಷವಾಗಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗಾಗಿ ಕಾಂಗ್ರೆಸ್ ಬ್ಯಾಟಿಂಗ್ ಮಾಡುತ್ತಿದೆ. ಕೋವಿಡ್ ಲಸಿಕೆ ಪಡೆಯಲು ಕೋವಿನ್ ನೋಂದಣಿ ಕಡ್ಡಾಯ ಬೇಡ ಎಂದು ವಿರೋಧ ಪಕ್ಷವೂ ಒತ್ತಾಯಿಸುತ್ತಿದೆ.

ಲಸಿಕೆಗಾಗಿ ಆನ್‌ಲೈನ್ ನೋಂದಣಿ ಸಾಕಾಗುವುದಿಲ್ಲ. ವ್ಯಾಕ್ಸಿನೇಷನ್ ಕೇಂದ್ರಕ್ಕೆ ನೇರವಾಗಿ ಬರುವ ಪ್ರತಿಯೊಬ್ಬ ವ್ಯಕ್ತಿಯು ಲಸಿಕೆ ನೀಡಬೇಕು ಎಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img