Tuesday, June 15, 2021
Homeಸುದ್ದಿ ಜಾಲಬಿಹಾರ :ಹಾಡುಹಗಲಲ್ಲೇ ಬ್ಯಾಂಕ್‌ನಲ್ಲಿ 1.19 ಕೋಟಿ ರೂ. ದರೋಡೆ

ಇದೀಗ ಬಂದ ಸುದ್ದಿ

ಬಿಹಾರ :ಹಾಡುಹಗಲಲ್ಲೇ ಬ್ಯಾಂಕ್‌ನಲ್ಲಿ 1.19 ಕೋಟಿ ರೂ. ದರೋಡೆ

 ಪಾಟ್ನಾ, ಜೂ. 10: ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ಗುರುವಾರ ಹಾಡುಹಗಲಲ್ಲೇ ಬಿಹಾರದ ಹಾಜಿಪುರದ ಖಾಸಗಿ ಬ್ಯಾಂಕ್‌ವೊಂದರಿಂದ 1.19 ಕೋಟಿ ರೂ. ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್‌ರ ಜಡುಹಾದಲ್ಲಿನ ನಿವಾಸದ ಬಳಿ ಇರುವ ಎಚ್‌ಡಿಎಫ್‌ಸಿ ಬ್ಯಾಂಕಿನ ಶಾಖೆಯಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

”ಬೈಕ್‌ನಲ್ಲಿ ಬಂದ ಐವರು ದರೋಡೆಕೋರರು ಬ್ಯಾಂಕ್‌ಗೆ ನುಗ್ಗಿ ನೌಕರರಿಗೆ ಬೆದರಿಕೆ ಹಾಕಿ ನಗದು ಕೊಠಡಿಯಿಂದ 1.19 ಕೋಟಿ ರೂಪಾಯಿಯನ್ನು ಚೀಲದಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಖದೀಮರು ಬ್ಯಾಂಕಿನಿಂದ ಹೊರಹೋಗುವಾಗ ಹಣದ ಚೀಲಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.

”ಬ್ಯಾಂಕ್‌ ಲೂಟಿಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಐವರ ಗುರುತು ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ದರೋಡೆಕೋರರಿಗೆ ಬಲೆ ಬೀಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕಳೆದ ವಾರ ಮುಜಫರ್‌ನಗರದಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು 65,000 ರೂ. ದರೋಡೆ ಮಾಡಿದ್ದರು. ಖತೋಲಿ ಪಟ್ಟಣದ ರೈಲ್ವೆ ರಸ್ತೆ ಬಳಿ ಗನ್‌ ತೋರಿಸಿ ಆರೋಪಿಗಳು ಬ್ಯಾಂಕಿನಲ್ಲಿ ದೋಚಿದ್ದರು. ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಬ್ಯಾಂಕಿನಿಂದ ನಗದು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img