Tuesday, June 15, 2021
Homeಸುದ್ದಿ ಜಾಲಲಾಕ್ಡೌನ್ ಹಿನ್ನೆಲ್ಲೆ : ಹಸಿದ ಹೊಟ್ಟೆಗಳಿಗೆ ನೆರವಿನ ಹಸ್ತ, ಚಿಕ್ಕೋಡಿ ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ...

ಇದೀಗ ಬಂದ ಸುದ್ದಿ

ಲಾಕ್ಡೌನ್ ಹಿನ್ನೆಲ್ಲೆ : ಹಸಿದ ಹೊಟ್ಟೆಗಳಿಗೆ ನೆರವಿನ ಹಸ್ತ, ಚಿಕ್ಕೋಡಿ ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಚಿಕ್ಕೋಡಿ : ಲಾಕ್‌ಡೌನ್ ನಿಂದ ಕೂಲಿ ಕಾರ್ಮಿಕರ ಹಾಗೂ ಬಡ ವರ್ಗದ ಜನರಿಗೆ ಜೀವನ ಸಾಗಿಸುವುದು ಸವಾಲಿನ ಕೆಲಸವೇ ಆಗಿದೆ, ಕೆಲಸ ಆಹಾರ ಇಲ್ಲದೆ ಲಾಕ್ ಡೌನ್ ನ ದಿನಗಳನ್ನ ಕಳೆಯುವುದೇ ಚಿಕ್ಕೋಡಿಯ ಬಡ ಜನರಿಗೆ ಸಂಕಷ್ಟವಾಗಿದೆ, ಈ ಸಂದರ್ಭದಲ್ಲಿ ಕಾನೂನು  ‌ಪಾಲನೆ ಜೊತೆ ನೊಂದವರ ಹೊಟ್ಟೆ ತುಂಬಿಸಿ  ಪಿಎಸ್ಐಗಳು ಮಾನವೀಯತೆ ಮೆರೆದಿದ್ದಾರೆ. ಕಾನೂನು ವ್ಯವಸ್ಥೆ ಜೊತೆ ಜನಸೇವೆಗೂ ನಾವು ಸೈ ಎಂದ ಚಿಕ್ಕೋಡಿ, ನಿಪ್ಪಾಣಿ ಪಿಎಸ್ಐಗಳು ಬಡ ಜನರಿಗೆ ಆಹಾರದ ಕಿಟ್​ ವಿತರಿಸುವ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣೆ ಪಿಎಸ್ಐ ರಾಕೇಶ್ ಬಗಲಿ ಹಾಗೂ ನಿಪ್ಪಾಣಿ ಶಹರ ಪೋಲಿಸ್ ಠಾಣೆ ಪಿಎಸ್ಐ ಅನಿಲ್‌ ಕುಂಬಾರ ಅಧಿಕಾರಿಗಳು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಪಿಎಸ್ಐಗಳುಲಾಕ್‌ಡೌನ್​‌ನಿಂದಾಗಿ ನೊಂದವರನ್ನು ಗುರುತಿಸಿ ನೆರವು ನೀಡಲು ಮುಂದಾದ ಈ‌ ಇಬ್ಬರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ ಹಸಿವಿನಿಂದ‌ ನರಳುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿ 50ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಧಿಕಾರಿಗಳ ಈ ಸೇವೆಗೆ ಚಿಕ್ಕೋಡಿ ಹಾಗೂ ನಿಪ್ಪಾಣಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img