Sunday, June 13, 2021
Homeಸುದ್ದಿ ಜಾಲರಾಜ್ಯದಲ್ಲಿ 4 ಹಂತಗಳಲ್ಲಿ 'ಅನ್ ಲಾಕ್' ಸಾಧ್ಯತೆ.! ಯಾವ ಹಂತದಲ್ಲಿ ಯಾವುದಕ್ಕೆ ಅನುಮತಿ.?

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ 4 ಹಂತಗಳಲ್ಲಿ ‘ಅನ್ ಲಾಕ್’ ಸಾಧ್ಯತೆ.! ಯಾವ ಹಂತದಲ್ಲಿ ಯಾವುದಕ್ಕೆ ಅನುಮತಿ.?

ಬೆಂಗಳೂರು : ರಾಜ್ಯದಲ್ಲಿ ಅನ್ ಲಾಕ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಅದಕ್ಕೂ ಮೊದಲೇ ಸಚಿವ ಆರ್ ಅಶೋಕ್ ಅನ್ ಲಾಕ್ ದಿಢೀರ್ ಆಗಿ ಮಾಡೋದಿಲ್ಲ. ಬದಲಾಗಿ ಹಂತ ಹಂತವಾಗಿ ಇರಲಿದೆ ಎಂದಿದ್ದಾರೆ. ಇಂತಹ ಹಂತ ಹಂತದ ರಿಪೋರ್ಟ್ ತಾಂತ್ರಿಕ ಸಲಹಾ ಸಮಿತಿ ನೀಡಿದ್ದು, ನಾಲ್ಕು ಹಂತಗಳಲ್ಲಿ ಅನ್ ಲಾಕ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ತನ್ನ ವರದಿಯಲ್ಲಿ ತಿಳಿಸಿದೆ. ಹಾಗಾದ್ರೇ.. ಈ ವರದಿಯಂತೆ ನಾಲ್ಕು ಹಂತದಲ್ಲಿ ಯಾವುದಕ್ಕೆ ಅವಕಾಶ ನೀಡಲಾಗಿದೆ ಎನ್ನುವ ಎಕ್ಸ್ ಕ್ಲೂಸಿವ್ ರಿಪೋರ್ಟ್ ಮುಂದೆ ಓದಿ..

ರಾಜ್ಯದಲ್ಲಿ ಜೂನ್.14ರವರೆಗೆ ಜಾರಿಗೊಳಿಸಿರುವಂತ ಕೊರೋನಾ ನಿಯಂತ್ರಣದ ಲಾಕ್ ಡೌನ್, ಜೂನ್ 14ರಿಂದ ಅನ್ ಲಾಕ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ನೀಡಿದ್ದು, ನಾಲ್ಕು ಹಂತಗಳಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸೋದಕ್ಕೆ ವರದಿಯಲ್ಲಿ ತಿಳಿಸಿದೆ. ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವಂತ ತಾಂತ್ರಿಕ ತಜ್ಞರ ವರದಿಯಲ್ಲಿ ಮೊದಲ ಹಂತದಲ್ಲಿ ಕಡಿಮೆ ರಿಸ್ಕ್ ಇರೋದಕ್ಕೆ ಅವಕಾಶ ನೀಡೋದಕ್ಕೆ ಸೂಚಿಸಿರುವಂತ ಸಮಿತಿಯು, ಎರಡನೇ ಹಂತದಲ್ಲಿ ಲೋ ರಿಸ್ಕ್ ವರ್ಗಕ್ಕೆ, ಮೂರನೇ ಹಂತದಲ್ಲಿ ಮಾಡರೇಟ್ ಹಂತಕ್ಕೆ ಕೊನೆಯದಾಗಿ, ಹೈ ರಿಸ್ಕ್ ವರ್ಗಕ್ಕೆ ಹಂತ ಹಂತವಾಗಿ ಅವಕಾಶ ನೀಡುವಂತೆ ತಿಳಿಸಿದೆ.

ಮೊದಲ ಹಂತದಲ್ಲಿ ಯಾವುದಕ್ಕೆ ಅನುಮತಿ.?

ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಶೇ.5ರಷ್ಟು ಪಾಸಿಟಿವಿಟಿ ರೇಟ್ ಕಡಿಮೆ ಆಗಿ, ಸಾವಿನ ಪ್ರಮಾಣ ಶೇ.1ರಷ್ಟು ಕಡಿಮೆ ಆಗಿದ್ದರೇ, ಡೈಲಿ ಕೇಸ್ 5000ಕ್ಕಿಂತ ಕಡಿಮೆ ಇದ್ದರೇ ಲಾಕ್ ಡೌನ್ ಓಪನ್ ಮಾಡಬಹುದು ಎಂಬುದಾಗಿ ತಿಳಿಸಿದೆ. ಈ ವರದಿಯಂತೆ ಮೊದಲ ಹಂತದಲ್ಲಿ ಮಾರುಕಟ್ಟೆ ತೆರೆಯೋದಕ್ಕೂ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ. ಆದ್ರೇ.. ಹೈ ರಿಸ್ಕ್ ಇರೋ ಮಾರುಕಟ್ಟೆ ಸದ್ಯಕ್ಕೆ ಓಪನ್ ಇಲ್ಲ. ಕಡಿಮೆ ಜನರು ಸೇರುವಂತ ಮಾರುಕಟ್ಟೆಗಳು ಮಾತ್ರವೇ ತೆರೆಯಲಿವೆ. ಅಲ್ಲದೇ ಸಣ್ಣ ಅಂಗಡಿಗಳು, ಓಪನ್ ಹೋಟೆಲ್, ಡಿಲಿವರಿ, ಮ್ಯಾರೇಜ್ ಹಾಲ್ ನಲ್ಲಿ 100 ರಿಂದ 200 ಸೀಟ್ ಹೊಂದಿರುವ ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ತೆರೆಯಲು ಅವಕಾಶ ನೀಡಬಹುದಾಗಿದೆ. ಕಾರ್ಖಾನೆ ಶೇ.50ರಷ್ಟು ನೌಕರರೊಂದಿಗೆ ತೆರೆಯಲು ಅವಕಾಶ ನೀಡಲಿದೆ ಎನ್ನಲಾಗುತ್ತಿದೆ.

ಮೊದಲ ಹಂತದಲ್ಲಿ ಶೇ.5ಕ್ಕಿಂತ ಪಾಸಿಟಿವಿಟಿ ರೇಟ್ ಕಡಿಮೆ ಆಗಿ, ಶೇ.1ಕ್ಕಿಂತ ಕಡಿಮೆ ಸಾವಿನ ಪ್ರಮಾಣ ಕಡಿಮೆಯಾದಂತ ಜಿಲ್ಲೆಗಳಲ್ಲಿ, ಒಂದು ವಾರ, 10 ದಿನ 15 ದಿನಗಳ ಆಧಾರದಲ್ಲಿ ಹಂತ ಹಂತವಾಗಿ ಅನ್ ಲಾಕ್ ಗೊಳಿಸಬೇಕು. ಪಬ್ಲಿಕ್ Rally, ಧರಣಿ, ಪ್ರತಿಭಟನೆ ಈ ವರ್ಷಾಂತ್ಯದವರೆಗೆ ಅವಕಾಶವನ್ನೇ ನೀಡುವಂತಿಲ್ಲ. ಎಲ್ಲಾ ಚುನಾವಣೆ, ಪ್ರಚಾರ, Rally ಮುಂದೂಡಬೇಕು ಎಂಬುದಾಗಿ ತಾಂತ್ರಿಕ ಸಲಹಾ ಸಮಿತಿ ತನ್ನ ವರದಿಯಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಆದ್ರೇ.. ರಾಜ್ಯದಲ್ಲಿ ಈ ಪ್ರಮಾಣ ಕೇವಲ ಐದಾರು ಜಿಲ್ಲೆಗಳಲ್ಲಿ ಮಾತ್ರವೇ ಇದೆ. ಮಿಕ್ಕುಳಿದಂತ ಜಿಲ್ಲೆಗಳಲ್ಲಿ, ಈ ಪ್ರಮಾಣ ಇಳಿಕೆಯಾಗಿಲ್ಲ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನ ಸರ್ಕಾರ ಜಾರಿಗೆ ತಂದಿದ್ದೇ ಆದಲ್ಲಿ, ಕೊರೋನಾ ನಿಯಂತ್ರಣಕ್ಕಾಗಿ ಈ ತಿಂಗಳ ಅಂತ್ಯದವರೆಗೆ ನೈಟ್ ಕರ್ಪ್ಯೂ ರಾಜ್ಯದಲ್ಲಿ ಜಾರಿಯಲ್ಲಿ ಇರಲಿದೆ. ಆದ್ರೇ.. ಇದನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

2ನೇ ಹಂತದಲ್ಲಿ ಯಾವುದಕ್ಕೆ ಅನುಮತಿ.?

ಮೊದಲನೇ ಹಂತದ ನಂತ್ರ, 2ನೇ ಹಂತದಲ್ಲಿ ರಾಜ್ಯದಲ್ಲಿ ಮಾಲ್, ಕಾಂಪ್ಲೆಕ್, ಶಾಫಿಂಗ್ ಲೈನ್, ಡೈನಿಂಗ್ ಹಾಲ್, ಎಸಿ, ನಾನ್ ಎಸಿ ಬಸ್ ಓಡಾಟಕ್ಕೆ, ಟ್ಯಾಕ್ಸಿ ಎಸಿ, ನಾನ್ ಎಸಿ ಓಡಾಟಕ್ಕೆ, ಸ್ಕೂಲ್, ಕಾಲೇಜು ತೆರೆಯೋದಕ್ಕೆ, ಸ್ವಿಮ್ಮಿಂಗ್ ಪೂರ್ ತೆರೆಯೋದಕ್ಕೆ ಮಾಡರೇಟ್ ರಿಸ್ಕ್ ಹಂತದಲ್ಲಿ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಶೇ.50ರಷ್ಟು ಜನರ ದರದಲ್ಲಿ ಒಂದೊಂದಕ್ಕೆ ಹಂತವಾಗಿ ಮೊದಲ ಹಾಗೂ ಎರಡನೇ ಹಂತದಲ್ಲಿ ಗ್ಯಾಪ್ ನೀಡಿ ತೆರೆಯೋದಕ್ಕೆ ಸಲಹೆ ಮಾಡಿದೆ.

3ನೇ ಹಂತದಲ್ಲಿ ಯಾವುದಕ್ಕೆ ಅನುಮತಿ.?

ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವಂತ ತಾಂತ್ರಿಕ ತಜ್ಞರ ವರದಿಯಲ್ಲಿ ಮೊದಲ ಹಂತದಲ್ಲಿ ಕಡಿಮೆ ರಿಸ್ಕ್ ಇರೋದಕ್ಕೆ ಅವಕಾಶ ನೀಡೋದಕ್ಕೆ ಸೂಚಿಸಿರುವಂತ ಸಮಿತಿಯು, ಎರಡನೇ ಹಂತದಲ್ಲಿ ಲೋ ರಿಸ್ಕ್ ವರ್ಗಕ್ಕೆ, ಮೂರನೇ ಹಂತದಲ್ಲಿ ಮಾಡರೇಟ್ ಹಂತಕ್ಕೆ ಕೊನೆಯದಾಗಿ, ಹೈ ರಿಸ್ಕ್ ವರ್ಗಕ್ಕೆ ಹಂತ ಹಂತವಾಗಿ ಅವಕಾಶ ನೀಡುವಂತೆ ತಿಳಿಸಿದೆ.

ಈ ವರದಿಯಂತೆ ಮೂರನೇ ಹಂತದಲ್ಲಿ ಕ್ಲಬ್, ಪಬ್, ಸ್ಪೋರ್ಟ್ ಇಂಡೋರ್, ಜಿಮ್, ಯೋಗ, ದೇವಸ್ಥಾನ ತೆರೆಯೋದಕ್ಕೆ ಅವಕಾಶ ನೀಡೋ ಸಾಧ್ಯತೆ ಇದೆ. ಹೀಗೆ ಮೂರನೇ ಹಂತದಲ್ಲಿ ಅನ್ ಲಾಕ್ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಾ ಎನ್ನುವುದನ್ನು ಇಂದು ಸಂಜೆ ಸಿಎಂ ಯಡಿಯೂರಪ್ಪ ನಡೆಸಲಿರುವಂತ ಸುದ್ದಿಗೋಷ್ಠಿಯಲ್ಲಿ ನಿರ್ಧಾರವಾಗಲಿದೆ.

4ನೇ ಹಂತದಲ್ಲಿ ಯಾವುದಕ್ಕೆ ಅನುಮತಿ.?

ಮೂರನೇ ಹಂತದಲ್ಲಿ ಕ್ಲಬ್, ಪಬ್, ಸ್ಪೋರ್ಟ್ ಇಂಡೋರ್, ಜಿಮ್, ಯೋಗ, ದೇವಸ್ಥಾನ ತೆರೆಯೋದಕ್ಕೆ ಅವಕಾಶ ನೀಡೋ ಸಾಧ್ಯತೆ ಇದೆ. ಈ ಬಳಕಿ ಹೈ ರಿಸ್ಕ್ ವಲಯಕ್ಕೆ ಸಿನಿಮಾ ಥಿಯೇಟರ್ ಸೇರ್ಪಡೆ ಗೊಳಿಸಲಾಗಿದ್ದು, ಹೈ ರಿಸ್ಕ್ ಪ್ರದೇಶವಾಗಿರುವಂತ ಸಿನಿಮಾ ಥಿಯೇಟರ್ ಗಳನ್ನು ನಾಲ್ಕನೇ ಹಂತದಲ್ಲಿ ತೆರೆಯೋದಕ್ಕೆ ಸಲಹೆ ಮಾಡಿದೆ. ಅದರಲ್ಲೂ ಶೇ.50ರಷ್ಟು ಸೀಟುಗಳ ಭರ್ತಿಗೆ ಮಾತ್ರವೇ ತಾಂತ್ರಿಕ ತಜ್ಞರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವಂತ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಒಟ್ಟಾರೆಯಾಗಿ ಜೂನ್.14ರ ನಂತ್ರ ಅನ್ ಲಾಕ್ ನಾಲ್ಕು ಹಂತಗಳಲ್ಲಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವಂತ ತಾಂತ್ರಿಕ ಸಲಹಾ ಸಮಿತಿಯ ವರದಿಯಲ್ಲಿ ತಿಳಿಸಿದೆ. ಈ ಕುರಿತಂತೆ ಇಂದು ಸಂಜೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿಯನ್ನು ನಡೆಸಲಿದ್ದು, ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img