Tuesday, June 15, 2021
Homeಸುದ್ದಿ ಜಾಲ18 ಆಮ್ಲಜನಕ ಘಟಕ ಸ್ಥಾಪನೆಗೆ ಮುಂದಾದ ಬಾಲಿವುಡ್ ನಟ ಸೋನು ಸೂದ್

ಇದೀಗ ಬಂದ ಸುದ್ದಿ

18 ಆಮ್ಲಜನಕ ಘಟಕ ಸ್ಥಾಪನೆಗೆ ಮುಂದಾದ ಬಾಲಿವುಡ್ ನಟ ಸೋನು ಸೂದ್

ಮುಂಬೈ: ಬಾಲಿವುಡ್ ನಟ ಸೋನು ಸೂದ್ ದೇಶಾದ್ಯಂತ ಆಮ್ಲಜನಕದ 18 ಘಟಕಗಳನ್ನು ಸ್ಥಾಪಿಸುವುದಾಗಿ ಮಾತು ಕೊಟ್ಟಿದ್ದಾರೆ.

ಮಂಗಳೂರು ಹಾಗೂ ಆಂಧ್ರ ಪ್ರದೇಶದ ಕರ್ನೂಲು ಮತ್ತು ನೆಲ್ಲೂರಿನಲ್ಲಿ ಅದಾಗಲೇ ಆಮ್ಲಜನಕದ ಘಟಕ ಸ್ಥಾಪನೆಯ ಕೆಲಸ ಆರಂಭಗೊಂಡಿದ್ದು, ಮಿಕ್ಕ ರಾಜ್ಯಗಳಲ್ಲೂ ಶೀಘ್ರ ಕೆಲಸ ಶುರುವಾಗಲಿದೆ ಎಂದಿರುವ ಸೂದ್‌, “ಕಳೆದ ಕೆಲ ತಿಂಗಳುಗಳಲ್ಲಿ ನಾವು ಬಹಳ ದೊಡ್ಡ ಸಮಸ್ಯೆಯೊಂದನ್ನು ಕಂಡಿದ್ದು, ನಾವೆಲ್ಲಾ ಆಮ್ಲಜನಕದ ಅಲಭ್ಯತೆಯನ್ನು ಎದುರಿಸುತ್ತಿದ್ದೇವೆ. ನಾನು ಹಾಗೂ ನನ್ನ ತಂಡ, ಆಮ್ಲಜನಕದ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಆಲೋಚನೆ ಮಾಡುತ್ತಿದ್ದವು. ಹೀಗಾಗಿ ಆಮ್ಲಜನಕದ ಘಟಕಗಳನ್ನು ಸಾಧ್ಯವಾದಷ್ಟು ಕಡೆಗಳಲ್ಲಿ ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶದ ಹಾಗೂ ಇನ್ನಿತರ ರಾಜ್ಯಗಳಲ್ಲಿ ಆಮ್ಲಜನಕದ ಘಟಕಗಳನ್ನು ಸ್ಥಾಪಿಸಲು ಸೂದ್ ಮುಂದಾಗಿದ್ದಾರೆ.

ಇನ್ನು ಕಳೆದ ವರ್ಷ ಕೋವಿಡ್‌ ಸಾಂಕ್ರಮಿಕವು ದೇಶಾದ್ಯಂತ ಅಲೆ ಸೃಷ್ಟಿಸಲು ಆರಂಭಿಸಿದ ದಿನಗಳಿಂದಲೂ ಅಸಹಾಯಕರ ನೆರವಿಗೆ ನಿಂತಿರುವ ನಟ ಸೋನು ಸೂದ್ ರಿಯಲ್ ಲೈಫ್ ಹೀರೋ ಆಗಿಬಿಟ್ಟಿದ್ದಾರೆ.

ವಲಸೆ ಕಾರ್ಮಿಕರಿಗೆ ಊಟ ಹಾಗೂ ಅವರವರ ಊರುಗಳಿಗೆ ಮರಳಿ ಹೋಗಲು ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಎಲ್ಲೆಡೆ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img