Monday, June 14, 2021
Homeಸುದ್ದಿ ಜಾಲನಮ್ಮ ದೇಶದಲ್ಲಿ ನಕ್ಸಲ್ ಎಂಬ ಪದ ಹುಟ್ಟಿದ್ದುಎಲ್ಲಿ ಮತ್ತು ಹೇಗೆ.?: ನಕ್ಸಲಿಸಂ ಎಂಬ ಬೀಜ ...

ಇದೀಗ ಬಂದ ಸುದ್ದಿ

ನಮ್ಮ ದೇಶದಲ್ಲಿ ನಕ್ಸಲ್ ಎಂಬ ಪದ ಹುಟ್ಟಿದ್ದುಎಲ್ಲಿ ಮತ್ತು ಹೇಗೆ.?: ನಕ್ಸಲಿಸಂ ಎಂಬ ಬೀಜ ಬಿತ್ತಿದ್ದು ಯಾರು? ಮುಂದೆ ಓದಿ..

ಪ್ರತಿದಿನ ಒಂದಿಲ್ಲೊಂದು ನಕ್ಸಲರ ಹಿಂಸಾತ್ಮಕ ಚಟುವಟಿಕೆಗಳು ಮತ್ತು ಸೈನಿಕರ ನಡುವೆ ಮುಖಾಮುಖಿಯಾದ ಘಟನೆಗಳ ಬಗ್ಗೆ ನಮಗೆ ಕೇಳಲು ಸಿಗುತ್ತವೆ. ಕಳೆದ 10 ವರ್ಷಗಳಲ್ಲಿ, ಛತ್ತೀಸ್‌ಗಢದಲ್ಲಿ ಒಟ್ಟು 3722 ನಕ್ಸಲೈಟ್ ದಾಳಿಗಳು ನಡೆದಿದ್ದು, ಇದರಲ್ಲಿ 489 ಜವಾನರು ಹು-ತಾತ್ಮರಾಗಿದ್ದು ಮತ್ತು ಒಟ್ಟು 656 ನಕ್ಸಲರು ಕೂಡ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ 736 ಸಾಮಾನ್ಯ ನಾಗರಿಕರೂ ಪ್ರಾಣ ಕಳೆದು ಕೊಂಡಿದ್ದಾರೆ.

ಇದೀಗ, ಛತ್ತೀಸ್‌ಗಢದಲ್ಲಿ ಅಂತಹುದೇ ನಕ್ಸಲೈಟ್ ದಾಳಿ ನಡೆದಿದ್ದು, ಅದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ದಾಳಿಯಲ್ಲಿ ದೇಶವು ತನ್ನ 22 ಸೈನಿಕರನ್ನು ಕಳೆದುಕೊಂಡಿತು.  ಬಿಜಾಪುರದಲ್ಲಿ ಹೊಂಚು ಹಾಕಿ ಕೂತಿದ್ದ 200 ರಿಂದ 300 ನಕ್ಸಲರು ಈ ಕಾರ್ಯಾಚರಣೆಯಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದರು, ಇದರಲ್ಲಿ ಸೈನಿಕರು ಹುತಾತ್ಮರಾಗಿದ್ದರು. ಈ ಪ್ರಕರಣವು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ ಮತ್ತು ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ‌‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಕ್ಸಲಿಸಂ ಹೇಗೆ ಮತ್ತು ಎಲ್ಲಿಂದ ಶುರುವಾಯಿತು ಎಂದು ಇಂದು ನಾವು  ನಿಮಗೆ ತಿಳಿಸಲಿದ್ದೇವೆ.

ನಕ್ಸಲ್ ಎಂಬ ಪದವು ಪಶ್ಚಿಮ ಬಂಗಾಳದ ನಕ್ಸಲ್ ವಾಡಿ ಎಂಬ ಸಣ್ಣ ಹಳ್ಳಿಯಿಂದ ಹುಟ್ಟಿಕೊಂಡಿತು. 1967 ರಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಚಾರು ಮಜುಂದಾರ್ ಮತ್ತು ಆತನ ಸಹಚರ ಕಾನು ಸಾನ್ಯಾಲ್ ಸರ್ಕಾರದ ಆಡಳಿತದ ವಿರುದ್ಧ ಸಶಸ್ತ್ರ ಆಂದೋಲನವನ್ನು ಶುರು ಮಾಡಿದರು. ಚಾರು ಮಜುಂದಾರ್ ಮತ್ತು ಕಾನು ಸಾನ್ಯಾಲ್ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋತ್ಸೋ ತ್ಸುಂಗ್ ನಿಂದ ಪ್ರಭಾವಿತರಾಗಿದ್ದರು. ಅವರ ಪ್ರಕಾರ ಭಾರತೀಯ ರೈತರು ಹಾಗು ಕಾರ್ಮಿಕರ ದುರ್ಗತಿಗೆ ಸರ್ಕಾರದ ತಪ್ಪು ನೀತಿಗಳೇ ಕಾರಣವೆಂದು ನಂಬಿದ್ದರು. ರೈತರು ಮತ್ತು ಕಾರ್ಮಿಕರೊಂದಿಗಿನ ಅಸಮಾನತೆ, ನ್ಯಾಯಸಮ್ಮತತೆಯನ್ನು ಸಶಸ್ತ್ರ ಚಳುವಳಿಯಿಂದ ಮಾತ್ರ ತೊಡೆದುಹಾಕಬಹುದು ಎಂಬುದು ಅವರ ವಾದವಾಗಿತ್ತು.

 1967 ರಲ್ಲಿ, ಕೆಲವು ನಕ್ಸಲರು ತಮ್ಮನ್ನು ಔಪಚಾರಿಕವಾಗಿ ಕಮ್ಯುನಿಸ್ಟ್ ಪಕ್ಷದಿಂದ ಬೇರ್ಪಡಿಸಿಕೊಂಡರು ಮತ್ತು ಒಟ್ಟಾಗಿ ಅಖಿಲ ಭಾರತ ಸಮನ್ವಯ ಸಮಿತಿಯನ್ನು ರಚಿಸಿದರು. ಅದರ ನಂತರ ಈ ಬಂಡುಕೋರರು ಒಗ್ಗೂಡಿ ಸರ್ಕಾರದ ವಿರುದ್ಧ ಸಶಸ್ತ್ರ ಆಂದೋಲನವನ್ನು ನಡೆಸಿದರು.

ದೀಪೇಂದ್ರ ಭಟ್ಟಾಚಾರ್ಯ ನೇತೃತ್ವದಲ್ಲಿ 1968 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಮಾರ್ಕ್ಸಿಸಂ ಆ್ಯಂಡ್ ಲೆನಿನಿಸಂ (ಸಿಪಿಎಂಎಲ್) ರಚನೆಯಾಯಿತು. ಅವರು ಮಾರ್ಕಸ್ ಮತ್ತು ಲೆನಿನ್‌ರ ಅಭಿಮಾನಿಯಾಗಿದ್ದರು ಮತ್ತು ಅವರಿಬ್ಬರ ತತ್ವಗಳ ಮೇಲೆಯೇ ಕೆಲಸ ಮಾಡಲು ಪ್ರಾರಂಭಿಸಿದರು.

1969 ರಲ್ಲಿ, ಚಾರು ಮಜುಂದಾರ್ ಮತ್ತು ಕಾನು ಸಾನ್ಯಾಲ್ ಭೂಸ್ವಾಧೀನಕ್ಕಾಗಿ ಭಾರತದಾದ್ಯಂತ ಸರ್ಕಾರದ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದರು. ಭೂಸ್ವಾಧೀನಕ್ಕೆ ಮೊದಲ ಧ್ವನಿ ಕೇಳಿ ಬಂದಿದ್ದು ಇದೇ ನಕ್ಸಲ್ವಾಡಿಯಿಂದಲೇ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು. ಅದರ ನಂತರ 1977 ರಲ್ಲಿ ಕಮ್ಯುನಿಸ್ಟರು ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು ಮತ್ತು ಜ್ಯೋತಿ ಬಸು ಮುಖ್ಯಮಂತ್ರಿಯಾದರು.

ಸಾಮಾಜಿಕ ಉನ್ನತಿಗಾಗಿ ಎಂದು ಪ್ರಾರಂಭವಾದ ಚಳುವಳಿಗಳು ಕ್ರಮೇಣ ರಾಜಕೀಯದತ್ತ ತಮ್ಮ ನಿಲುವನ್ನು ಬದಲಾಯಿಸಿದವು. ಚಳುವಳಿ ಶೀಘ್ರದಲ್ಲೇ ತನ್ನ ಉದ್ದೇಶಗಳಿಂದ ವಿಮುಖವಾಯಿತು, ಚಳುವಳಿ ಬಿಹಾರವನ್ನು ತಲುಪಿದಾಗ, ಅದು ಜನಾಂಗೀಯ ವರ್ಗದ ಯುದ್ಧವಾಗಿ ಮಾರ್ಪಟ್ಟಿತು. ಅಲ್ಲಿ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರ ಯುದ್ಧವು ಹಿಂಸೆಯ ಸ್ವರೂಪವನ್ನು ಪಡೆದುಕೊಂಡಿತು.

ಹಿಂಸಾತ್ಮಕ ಆಂದೋಲನದಿಂದಾಗಿ 1972 ರಲ್ಲಿ ಚಾರು ಮಜುಂದಾರ್‌ನ್ನ ಬಂಧಿಸಲಾಯಿತು, ನಂತರ ಆತ ಜೈಲಿನಲ್ಲಿ ಹತ್ತನೇ ದಿನಕ್ಕೆ ಸಾವನ್ನಪ್ಪಿದನು. ಆತನ ಸಹಚರ ಕಾನು ಸಾನ್ಯಾಲ್ ಮಾರ್ಚ್ 23, 2010 ರಂದು ರಾಜಕೀಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡನು.

ನಕ್ಸಲಿಸಂ ಮುಖ್ಯವಾಗಿ ಆಂಧ್ರಪ್ರದೇಶ, ಛತ್ತೀಸ್‌ಗಢ್, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಸಕ್ರಿಯವಾಗಿದೆ. ಈ ರಾಜ್ಯಗಳಿಂದ ಪ್ರತಿದಿನ ನಕ್ಸಲಿಸಂಗೆ ಸಂಬಂಧಿತ ಘಟನೆಗಳ ಸುದ್ದಿ ಬರುತ್ತಲೇ ಇರುತ್ತವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img