Tuesday, June 15, 2021
Homeಸುದ್ದಿ ಜಾಲಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆಗೆ ಆಗ್ರಹಿಸಿ ಭಿಕ್ಷಾಟನೆ

ಇದೀಗ ಬಂದ ಸುದ್ದಿ

ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆಗೆ ಆಗ್ರಹಿಸಿ ಭಿಕ್ಷಾಟನೆ

ಕಲಬುರಗಿ : ದೇಶದಲ್ಲಿ ಆಗುತ್ತಿರುವ ಬೆಲೆ ಏರಿಕೆಗೆ ಖಡಿವಾಣ ಹಾಕಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವಿರೋಧಿ, ರೈತ ವಿರೋಧಿಯಾಗಿದ್ದಾರೆ ಎಂದು ಪ್ರಧಾನಿ ಮೋದಿಯವರು ರಾಜಿನಾಮೆ ನೀಡುವಂತೆ ಆಗ್ರಹಿಸಿ ಇಂದು ನಗರದ ಸರಕಾರಿ ಆಸ್ಪತ್ರೆ , ಜಿಲ್ಲಾಧಿಕಾರಿ ಕಛೇರಿ ಎದುರು ಅಹಿಂತ ಚಿಂತಕರ ವೇದಿಕೆ ಕಾರ್ಯಕರ್ತರಿಂದ ಪ್ರಧಾನಿ ಮೋದಿಗಾಗಿ ಭಿಕ್ಷೆ ಬೇಡಲಾಯಿತು.

ಕಳೆದ ಎಳು ವರ್ಷದಲ್ಲಿ ಆರ್ಥಿಕವಾಗಿ, ಉದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಕೇಂದ್ರ ಸರಕಾರದ ಅವೈಜ್ಞಾನಿಕ ನೀತಿಗಳಾದ ನೋಟ್ ಬ್ಯಾನ್, ಬ್ಯಾಂಕುಗಳ ವಿಲೀನಕರಣ, ರೈತ ವಿರೋಧಿ ನೀತಿಗಳು, ನಿರುದ್ಯೋಗ ಸಮಸ್ಯೆಗಳು, ತೈಲ ಬೆಲೆ, ಅಹಾರ ಬೆಲೆ ಏರಿಕೆ ಹೀಗೆ ಹತ್ತಾರು ಸಮಸ್ಯೆಗಳಿಂದ ದೇಶ ತತ್ತರಿಸಿ ಹೋಗಿದೆ ಇದಕ್ಕೆ ಕೇಂದ್ರ ಸರಕಾರವೇ ಹೊಣೆಯಾಗಿದೆ. ಈ ಕೂಡಲೆ ಪ್ರಧಾನಿ ನರೇಂದ್ರ ಮೋದಿ ರಾಜಿನಾಮೆ ನೀಡಬೇಕೆಂದು ಅಹಿಂತ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣಾ ಜಮಾದಾರ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಜು ಹೋಡಲ್ಕರ್, ಸತೀಶ ಹುಗ್ಗಿ, ವಿನೋದ ಸಂಗಮ್ ಸೇರಿದಂತೆ ಹಲವರು ಇದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img