Monday, June 14, 2021
Homeಕಾಗವಾಡಸಿಎಂ ಬಿಎಸ್ ವೈ ರಾಜಿನಾಮೆ ವಿಚಾರ : ಅಡ್ಡಗೋಡೆಯ ಮೇಲೆ ದೀಪವಿಟ್ಟ ಜವಳಿಖಾತೆ ಸಚೀವ ಶ್ರೀಮಂತ...

ಇದೀಗ ಬಂದ ಸುದ್ದಿ

ಸಿಎಂ ಬಿಎಸ್ ವೈ ರಾಜಿನಾಮೆ ವಿಚಾರ : ಅಡ್ಡಗೋಡೆಯ ಮೇಲೆ ದೀಪವಿಟ್ಟ ಜವಳಿಖಾತೆ ಸಚೀವ ಶ್ರೀಮಂತ ಪಾಟೀಲ್

ಕಾಗವಾಡ  : ಬಿಎಸ್ ವೈ ರಾಜಿನಾಮೆ ವಿಚಾರವಾಗಿ ಜವಳಿ ಖಾತೆ ಸಚೀವ ಶ್ರೀಮಂತ ಪಾಟೀಲ ಅಡ್ಡಗೊಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.ನಮ್ಮದು ಶಿಸ್ತಿನ ಪಕ್ಷವಾಗಿದೆ ಹೈ ಕಮಾಂಡ ಹೇಳಿದ್ದನ್ನು ನಾನು ಪಾಲಿಸುತ್ತೇನೆ ಅನ್ನುವ ರೀತಿಯಲ್ಲಿ ಬಿಎಸ್ವೈ ಹಾಗೆ ಹೇಳಿದ್ದಾರೆ.ಸಹಿ ಸಂಗ್ರಹ ವಿಚಾರ ನನಗೆ ಎನೂ ಗೊತ್ತಿಲ್ಲ. ನಾನು ಎಲ್ಲಿಯು ಸಹಿ ಮಾಡಿಲ್ಲ ನನ್ನ ಹತ್ತಿರ ಸಹಿ ಪಡೆಯಲು ಯಾರೂ ಬಂದಿಲ್ಲ.ಹೈ ಕಮಾಂಡ ಯಾರನ್ನು ಸಿ ಎಮ್ ಮಾಡುತ್ತದೆಯೋ  ಅವರೊಂದಿಗೆ ನಾವು ಇರುತ್ತೇವೆ.ಅವರೇ ನಮ್ಮ ಸಿ ಎಮ್ ಅನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆ ಯಲ್ಲಿ ಪ್ರತಿಕ್ರಿಯೆ ನೀಡಿದ ಅಲ್ಪಸಂಖ್ಯಾತ ಮತ್ತು ಜವಳಿ ಖಾತೆ ಸಚೀವ ಶ್ರೀಮಂತ ಪಾಟೀಲ ಬಿ ಎಸ್ ವೈ ನಮ್ಮ ನಾಯಕರು ಅನ್ನುತ್ತಿದ್ದವರು ಸದ್ಯ ಹೈ ಕಮಾಂಡ್ ಯಾರನ್ನು ಸೂಚಿಸುತ್ತದೆಯೋ ಅವರೆ ನಮ್ಮ ನಾಯಕರು ಅನ್ನುವ ಮೂಲಕ ಸಿ ಎಮ್ ಸ್ಥಾನ ಬದಲಾವಣೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಇನ್ನು ಇದೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮತ್ತು ಡಿಸಿಎಮ್ ಲಕ್ಷ್ಮಣ ಸವದಿ ಅವರ ಗೈರಾಗಿದ್ದ ವೇಳೆ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ಆರ್ ಎಸ್ ಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದ ಪೊಟೋಗಳು ಮಾಧ್ಯಮಗಳಿಗೆ ಲಬ್ಯವಾಗಿದ್ದು ರಾಜ್ಯದ ರಾಜಕಾರಣದಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.

 ಸಚಿನ್ ಕಾಂಬ್ಳೆ

ವಿ ನ್ಯೂಜ್೨೪ ಕನ್ನಡ ಕಾಗವಾಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img