Monday, June 14, 2021
Homeಜಿಲ್ಲೆಬೆಂಗಳೂರು ಗ್ರಾಮಾಂತರದಲಿತ ಕೂಲಿ ಕಾರ್ಮಿಕರ ವೇದಿಕೆಯವತಿಯಿಂದ ಸಾರ್ವಜನಿಕರಿಗೆ ದಿನಸಿ ಕಿಟ್ ವಿತರಣೆ

ಇದೀಗ ಬಂದ ಸುದ್ದಿ

ದಲಿತ ಕೂಲಿ ಕಾರ್ಮಿಕರ ವೇದಿಕೆಯವತಿಯಿಂದ ಸಾರ್ವಜನಿಕರಿಗೆ ದಿನಸಿ ಕಿಟ್ ವಿತರಣೆ

ಹೊಸಕೋಟೆ :  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ಘಟಕದವತಿಯಿಂದ ಕೊರೊನಾ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಕಷ್ಟಕ್ಕೆ ಧಾವಿಸಿ ನೆರವು ನೀಡುತ್ತಿದ್ದಾರೆ.

ಈಗಾಗಲೇ ಕೊರೊನಾ ಸಂಕಷ್ಟ ಸಮಯದಲ್ಲಿ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿ ಕೆಲಸ ಕಾರ್ಯಗಳಿಲ್ಲದೆ ಒಂದೊಟ್ಟಿನ ಊಟಕ್ಕೂ ಪರಿತಪಿಸುತ್ತಿರುವ ಜನರಿಗೆ ಅಗತ್ಯ ಸೇವೆಗಳ ಅವಶ್ಯಕತೆ ಇದ್ದು ಅವರ ನೆರವಿಗೆ ಸಂಘಟನೆಯ ಪದಾಧಿಕಾರಿಗಳು ಧಾವಿಸಿದ್ದಾರೆ.

ಸರಕಾರದಿಂದ ಸಂಘಟನೆಗೆ ಯಾವುದೇ ಅನುದಾನ ಬರುವುದಿಲ್ಲ ಆದರೂ ಸಹ ಜನರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಸಂಘಟನೆಯವತಿಯಿಂದ ಅಳಿಲು ಸೇವೆ ಸಲ್ಲಿಸಲಾಗುತ್ತಿದೆ. ಜನರು ಕೊರೊನಾ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಸಂಘಟನೆಯ ರಾಜ್ಯಾದ್ಯಕ್ಷರಾದ ಗಂಗಬೈಲಪ್ಪ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img