Tuesday, June 15, 2021
Homeಅಂತರ್ ರಾಜ್ಯಬಸ್​ಗೆ ಜೆಸಿಬಿ ಡಿಕ್ಕಿ: 17 ಮಂದಿ ಸ್ಥಳದಲ್ಲೇ ಸಾವು

ಇದೀಗ ಬಂದ ಸುದ್ದಿ

ಬಸ್​ಗೆ ಜೆಸಿಬಿ ಡಿಕ್ಕಿ: 17 ಮಂದಿ ಸ್ಥಳದಲ್ಲೇ ಸಾವು

 ಕಾನ್ಫುರ: ನಗರದಲ್ಲಿ ಮಿನಿ ಬಸ್​ ಮತ್ತು ಜೆಸಿಬಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 17 ಮಂದಿ ಮೃತಪಟಿದ್ದಾರೆ. ಗಂಭೀರ ಗಾಯಗೊಂಡ ಐವರ ಸ್ಥಿತಿ ಚಿಂತಾಜನಕವಾಗಿದೆ.

ಉತ್ತರ ಪ್ರದೇಶದ ಕಾನ್ಫುರದ ಸಚೇಂದಿ ಬಳಿಯ ಕಿಸಾನ್​ ನಗರ ಕಾಲುವೆ ಬಳಿ ಮಂಗಳವಾರ ಸಂಜೆ ಜೆಸಿಬಿ ವೇಗವಾಗಿ ಬಂದು ಬಸ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್​ನಲ್ಲಿದ್ದ 17 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಬಸ್​ ದೆಹಲಿಯಿಂದ ಲಕ್ನೋಗೆ ಸಂಚರಿಸುತ್ತಿತ್ತು. 

ಕಾನ್ಫುರ ಅಪಘಾತ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೂ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img