Monday, June 14, 2021
Homeಅಂತರ್ ರಾಜ್ಯಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ಗೆ ಬಿಗ್ ಶಾಕ್ ಕೊಟ್ಟ ತಂದೆ ಮುಲಾಯಂ ಸಿಂಗ್...

ಇದೀಗ ಬಂದ ಸುದ್ದಿ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ಗೆ ಬಿಗ್ ಶಾಕ್ ಕೊಟ್ಟ ತಂದೆ ಮುಲಾಯಂ ಸಿಂಗ್ ಯಾದವ್

ಲಖನೌ: ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ತಂದೆ, ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಅಧಿಕೃತ ಟ್ವಿಟರ್‌ನಲ್ಲಿ ಅವರ ಫೋಟೋ ಶೇರ್‌ ಮಾಡಲಾಗಿದೆ.

ಇದು ಅಖಿಲೇಶ್‌ ಅವರನ್ನು ಮುಜುಗರಕ್ಕೆ ಸಿಲುಕಿಸಿದೆ. ಇದಕ್ಕೆ ಕಾರಣ, ಲಸಿಕೆ ಆರಂಭವಾದ ಮೊದಲ ದಿನದಿಂದಲೂ ಅಖಿಲೇಶ್‌, ಇದು ಬಿಜೆಪಿ ವ್ಯಾಕ್ಸಿನ್‌, ಇದರ ಮೇಲೆ ನನಗೆ ನಂಬಿಕೆ ಇಲ್ಲ, ನಾನು ಅದನ್ನು ಹಾಕಿಕೊಳ್ಳುವುದಿಲ್ಲ ಎಂದು ಕಂಡಕಂಡಲ್ಲಿ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈಗ ಅವರ ತಂದೆಯೇ ಲಸಿಕೆ ಹಾಕಿಸಿಕೊಂಡಿದ್ದೂ ಅಲ್ಲದೇ ಅದು ಟ್ವಿಟರ್‌ನಲ್ಲಿ ಶೇರ್‌ ಆಗಿರುವ ಕಾರಣ, ಅಖಿಲೇಶ್‌ ಬಿಜೆಪಿ ಮುಖಂಡ ಬಾಯಿಗೆ ಆಹಾರವಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img