Sunday, June 13, 2021
Homeಸುದ್ದಿ ಜಾಲ`EPFO' ನಿಂದ ಉದ್ಯೋಗಿಗಳಿಗೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

`EPFO’ ನಿಂದ ಉದ್ಯೋಗಿಗಳಿಗೆ ಮಹತ್ವದ ಮಾಹಿತಿ

ನವದೆಹಲಿ: 6 ಕೋಟಿ ಉದ್ಯೋಗಿಗಳಿಗೆ ಪ್ರಮುಖ ಮಾಹಿತಿ ಇದಾಗಿದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿಯಮವೊಂದನ್ನ ಬದಲಾಯಿಸಿದ್ದು, ಈಗ 2021ರ ಜೂನ್ 1ರಿಂದ ಆಧಾರ್ ಕಾರ್ಡ್‌ʼನ್ನ ನೌಕರರ ಭವಿಷ್ಯ ನಿಧಿಯೊಂದಿಗೆ (ಇಪಿಎಫ್‌ಒ) ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅಂದ್ರೆ, ಈಗ ಪಿಎಫ್ ಖಾತೆಯ ಯುಎಎನ್ (ಯುನಿವರ್ಸಲ್ ಅಕೌಂಟ್ ಸಂಖ್ಯೆ) ಅನ್ನ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿರುತ್ತದೆ.

ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರಲ್ಲಿ ಇಪಿಎಫ್‌ಒ ಬದಲಾವಣೆಗಳನ್ನ ಮಾಡಿದ್ದು, ಇದರೊಂದಿಗೆ ಇಸಿಆರ್ ಫೈಲಿಂಗ್ ಪ್ರೋಟೋಕಾಲ್ ಅನ್ನು ಬದಲಾಯಿಸಲಾಗಿದೆ. ಅಂದ್ಹಾಗೆ, ಈ ಮಾಹಿತಿಯನ್ನ ಟ್ವೀಟ್ ಮೂಲಕ ನೀಡಲಾಗಿದೆ.

ಆಧಾರ್ ಲಿಂಕ್‌ ಮಾಡದಿದ್ರೆ ನಿಮ್ಗೆ ನಷ್ಟ..! ಈ ನಿಯಮದ ನಂತ್ರ, ಈಗ ಇಪಿಎಫ್ ಖಾತೆಯನ್ನ ಖಾತೆದಾರರ ಆಧಾರ್ ಸಂಖ್ಯೆಗೆ ಲಿಂಕ್ ಮಾಡದಿದ್ದರೆ, ಉದ್ಯೋಗದಾತರ ಕೊಡುಗೆಯನ್ನ ಅಂತಹ ಇಪಿಎಫ್ ಖಾತೆಗೆ ಜಮಾ ಮಾಡಲಾಗುವುದಿಲ್ಲ. ಸರಳವಾಗಿ ಹೇಳುವುದಾದ್ರೆ, ನಿಮ್ಮ ಖಾತೆಯೊಂದಿಗೆ ಆಧಾರ್ ಸಂಪರ್ಕ ಹೊಂದಿಲ್ಲದಿದ್ದರೆ, ಉದ್ಯೋಗಿಗಳ ಖಾತೆಗೆ ಬರುವ ಕಂಪನಿಯ ಕೊಡುಗೆಯನ್ನ ಇಪಿಎಫ್‌ಒ ನಿಲ್ಲಿಸಬಹುದು. ಆದ್ದರಿಂದ, ನೀವು ಪಿಎಫ್ ಖಾತೆಯಲ್ಲಿ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ, ಈ ಕೆಲಸವನ್ನ ತ್ವರಿತವಾಗಿ ಪೂರ್ಣಗೊಳಿಸಿ. ಯುಎಎನ್ ಆಧಾರ್ ಅನ್ನು ಪರಿಶೀಲಿಸದ ಇಪಿಎಫ್ ಖಾತೆಗಳಿಗೆ ಉದ್ಯೋಗದಾತರ ಇಪಿಎಫ್ ಕೊಡುಗೆಯನ್ನು ಜಮಾ ಮಾಡಲಾಗುವುದಿಲ್ಲ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಸಂಸ್ಥೆ ಏನು ಹೇಳಿದೆ?

ಹೊಸ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿದ ಇಪಿಎಫ್‌ಒ, ‘ಆತ್ಮೀಯ ಉದ್ಯೋಗದಾತ, 2020 ರ ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 142ರ ಅನುಷ್ಠಾನದೊಂದಿಗೆ, ಆಧಾರ್ ಸಂಖ್ಯೆ ಹೊಂದಿರುವ ಸದಸ್ಯರಿಗೆ ಮಾತ್ರ ಇಸಿಆರ್ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ. 01.06.2021 ರಿಂದ ಆಧಾರ್ ಅನ್ನು ಯುಎಎನ್‌ನೊಂದಿಗೆ ಸಂಪರ್ಕಿಸಬೇಕು. ಇಪಿಎಫ್‌ಒ ಮತ್ತಷ್ಟು ಹೇಳಿದ್ದು, ‘ನಿಯಮಗಳ ಪ್ರಕಾರ, ದಯವಿಟ್ಟು ಎಲ್ಲಾ ಕೊಡುಗೆ ನೀಡುವ ಸದಸ್ಯರಿಗೆ ಸಂಬಂಧಿಸಿದಂತೆ ಆಧಾರ್ ಲಿಂಕ್‌ ಮಾಡುವುದನ್ನ ಖಚಿತಪಡಿಸಿಕೊಳ್ಳಿ ಇದರಿಂದ ಅವರು ಇಪಿಎಫ್‌ಒನ ನಿರಂತರ ಸೇವೆಗಳನ್ನ ಪಡೆಯಬಹುದು ಮತ್ತು ಯಾವುದೇ ಅನಾನುಕೂಲತೆಯನ್ನ ತಪ್ಪಿಸಬಹುದು’ ಎಂದಿದೆ.

ಆಧಾರ್ ಕಾರ್ಡ್‌ ಜೊತೆಗೆ ಇಪಿಎಫ್‌ ಲಿಂಕ್‌ ಮಾಡುವುದು ಹೇಗೆ?

>> ಮೊದಲು ನೀವು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
>> ಈ ಲಿಂಕ್‌ https://unifiedportal-mem.epfindia.gov.in/memberinterface/ ಕ್ಲಿಕ್‌ ಮಾಡಿ
>> ಇದರ ನಂತರ, ಈಗ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಲಾಗ್-ಇನ್ ಮಾಡಿ.
>> ನಂತರ ಈಗ ನೀವು ಮ್ಯಾನೇಜ್ ವಿಭಾಗದಲ್ಲಿ ಕೆವೈಸಿ ಆಯ್ಕೆಯನ್ನ .
>> ಈಗ ನೀವು ಆಧಾರ್ʼನ್ನ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲು ಹಲವು ದಾಖಲೆಗಳನ್ನು ನೋಡುತ್ತೀರಿ.
>> ನೀವು ಆಧಾರ್ ಆಯ್ಕೆಯನ್ನ ಆರಿಸಿ ಮತ್ತು ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ಟೈಪ್ ಮಾಡುವ ಮೂಲಕ ಸೇವೆಯ ಮೇಲೆ .
>> ಇದರ ನಂತರ ನೀವು ನೀಡಿದ ಮಾಹಿತಿಯು ಸುರಕ್ಷಿತವಾಗಿರುತ್ತದೆ ಮತ್ತು ನಿಮ್ಮ ಆಧಾರ್ ಅನ್ನು ಯುಐಡಿಎಐ ಡೇಟಾದೊಂದಿಗೆ ಪರಿಶೀಲಿಸಲಾಗುತ್ತದೆ.
>> ನಿಮ್ಮ ಕೆವೈಸಿ ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಆಧಾರ್ ಅನ್ನು ನಿಮ್ಮ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img