Tuesday, June 15, 2021
Homeರಾಜ್ಯರಾಜ್ಯದ ಸರ್ಕಾರಿ ಡಿಪ್ಲೋಮಾ, ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ !

ಇದೀಗ ಬಂದ ಸುದ್ದಿ

ರಾಜ್ಯದ ಸರ್ಕಾರಿ ಡಿಪ್ಲೋಮಾ, ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ !

ಬೆಂಗಳೂರು : ಕೊರೋನಾ ಸೋಂಕಿನ ಕಾರಣದಿಂದಾಗಿ ನಿಯಂತ್ರಣ ಕ್ರಮವಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅನ್ ಲಾಕ್ ನಂತ್ರ, ರಾಜ್ಯದ ಸರ್ಕಾರಿ ಕಾಲೇಜುಗಳ ಡಿಪ್ಲೋಮಾ, ಡಿಗ್ರಿ ವಿದ್ಯಾರ್ಥಿಗಳ ಆನ್ ಲೈನ್ ಕಲಿಕೆಗೆ ಉಪಯೋಗವಾಗುವಂತೆ, ಉತ್ತಮ ಗುಣಮಟ್ಟದ ಟ್ಯಾಬ್ ಗಳನ್ನು ರಾಜ್ಯ ಸರ್ಕಾರದಿಂದ ವಿತರಿಸುವ ಕಾರ್ಯ ಶುರುವಾಗಲಿದೆ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಈ ಕುರಿತಂತೆ ನಿನ್ನೆ ಸಿಇಟಿ ವಿಚಾರವಾಗಿ ನಡೆದಂತ ಸಭೆಯ ನಂತ್ರ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸಿಇಟಿ ಸಭೆ ವಿಚಾರದಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ವಿವಿಧ ಅಧಿಕಾರಿಗಳು, ತಜ್ಞರು ಭಾಗವಹಿಸಿದ್ದರು. ಸಚಿವ ಸುರೇಶ್ ಕುಮಾರ್ ಸಲಹೆಯನ್ನು ನೀಡಿ, ದ್ವಿತೀಯ ಪಿಯು ಅಂಕಗಳನ್ನು ಈ ಬಾರಿ ಪರಿಗಣಿಸದಂತೆ ಮನವಿ ಮಾಡಿದ್ದರು. ಸಿಇಟಿ ಆಧಾರದ ಮೇಲೆ RANK ನೀಡುವ ಕಾರ್ಯ ನಡೆಯಬೇಕು ಎಂಬುದಾಗಿ ತಿಳಿಸಿದ್ದರು. ಈ ವಿಚಾರವಾಗಿ ವಿಸೃತವಾಗಿ ಚರ್ಚೆ ಮಾಡಿ, ಸಂಬಂಧ ಪಟ್ಟ ಎಲ್ಲಾ ಕೌನ್ಸಿಲ್ ಗಳಿಗೆ ಪತ್ರವನ್ನು ಬರೆದು, ಈ ಬಗ್ಗೆ ರಿಲ್ಯಾಕ್ಸೇಷನ್ ಕೊಡುವಂತೆ ಕೋರಲಾಗುತ್ತದೆ ಎಂದರು.

ಪಿಯುಸಿ ಮಾರ್ಕ್ ಅನ್ನು ಈ ವರ್ಷ ತೆಗೆದುಕೊಳ್ಳೋದಿಲ್ಲ. ಈ ವರ್ಷ ಸಿಇಟಿ ಪರೀಕ್ಷೆಯ ಅಂಕವನ್ನು ಪರಿಗಣಿಸಿಯೇ RANK ನೀಡುವಂತ ಕಾರ್ಯವನ್ನು ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯ ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28, 29ರಂದು ನಡೆಸಲಾಗುತ್ತದೆ. ಮೊದಲ ದಿನ ಮ್ಯಾಥಮೇಟಿಕ್ಸ್ ಹಾಗೂ ಬಯೋಲಜಿ ಪರೀಕ್ಷ ನಡೆಯಲಿದೆ. ಎರಡನೇ ದಿನ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ. ಮೂರನೇ ದಿನ ಗಡಿನಾಡಿನ ಕನ್ನಡಿಗರಿಗೆ ಪ್ರತ್ಯೇಕವಾಗಿ ಕನ್ನಡ ಪರೀಕ್ಷೆ ನಡೆಯಲಿದೆ. ಜೂನ್.15ರಿಂದ ಸಿಇಟಿ ಪರೀಕ್ಷೆ ಪರೀಕ್ಷೆಗೆ ನೊಂದಣಿ ಆರಂಭವಾಗಲಿದೆ ಎಂದರು.

ಸಿಇಟಿನಲ್ಲಿ ನೀಟ್ ತರ ಮಿನಿಮಮ್ ಮಾರ್ಕ್ ಪರಿಗಣಿಸೋ ಬಗ್ಗೆಯೂ ಚರ್ಚೆ ನಡೆಸಲಾಯಿತು. ಅಂಕಿ ಅಂಶಗಳನ್ನು ನೋಡಿ, ಯಾವುದು ಸೂಕ್ತ ಎನ್ನುವ ಬಗ್ಗೆ ಇದೆ. ಈ ದಿಕ್ಕಿನಲ್ಲಿ ಕೂಡ ಚರ್ಚೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, 1.60 ಸಾವಿರ ಟ್ಯಾಬ್ ಗಳನ್ನು ಕೊಡೋದು ಬಾಕಿ ಇದೆ. ಅನ್ ಲಾಕ್ ನಂತ್ರ ಅದನ್ನು ಹಂಚಿಕೆ ಮಾಡಲಾಗುತ್ತದೆ. ಸರ್ಕಾರಿ ಕಾಲೇಜಿನ ಡಿಪ್ಲೋಮಾ, ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಆನ್ ಲೈನ್ ಕಲಿಕೆಗೆ ನೆರವಾಗುವಂತ ಕಾರ್ಯವನ್ನು ಮಾಡಲಿದ್ದೇವೆ. ಉತ್ತಮ ಗುಣಮುಟ್ಟದ ಟ್ಯಾಬ್ ಗಳನ್ನು ಆನ್ ಲಾಕ್ ನಂತ್ರ, ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂಬುದಾಗಿ ಹೇಳುವ ಮೂಲಕ, ಡಿಪ್ಲೋಮಾ, ಡಿಗ್ರಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img