Tuesday, June 15, 2021
Homeಸುದ್ದಿ ಜಾಲಹಣ ವಂಚನೆ ಪ್ರಕರಣ : ಮಹಾತ್ಮಗಾಂಧಿ ಮರಿ ಮೊಮ್ಮಗಳಿಗೆ 7 ವರ್ಷ ಜೈಲು

ಇದೀಗ ಬಂದ ಸುದ್ದಿ

ಹಣ ವಂಚನೆ ಪ್ರಕರಣ : ಮಹಾತ್ಮಗಾಂಧಿ ಮರಿ ಮೊಮ್ಮಗಳಿಗೆ 7 ವರ್ಷ ಜೈಲು

ಹಣ ವಂಚನೆ ಪ್ರಕರಣದಲ್ಲಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ (56) ಅವರಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನಕಲಿ ದಾಖಲೆಗಳನ್ನು ಒದಗಿಸಿ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮಹಾರಾಜ್ ಅವರಿಗೆ 6.2 ದಶಲಕ್ಷ ರಾಂಡ್​ ಅಂದರೆ ಭಾರತೀಯ ರೂಪಾಯಿ ಪ್ರಕಾರ 3,33,59,586 ರೂ. ವಂಚಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್‌ಗೋಬಿನ್ ಅವ​ರನ್ನು ‘ದೋಷಿ’ ಎಂದು ಡರ್ಬನ್ ವಿಶೇಷ ವಾಣಿಜ್ಯ ಅಪರಾಧ ನ್ಯಾಯಾಲಯ ತೀರ್ಪು ನೀಡಿದೆ.

ಲತಾ ರಾಮ್‌ಗೋಬಿನ್ ಅವರು ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಅಹಿಂಸಾ ಕೇಂದ್ರದ ಪಾರ್ಟಿಸಿಪೇಟಿವ್​ ಡೆವಲಪ್​ಮೆಂಟ್​ ಇನಿಶಿಯೇಟಿವ್​​ ಸ್ಥಾಪಕಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಇಲ್ಲಿ ಇವರು ಪರಿಸರ, ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಹೋರಾಟಗಾರ್ತಿ ಎಂದು ತಮ್ಮನ್ನು ಬಿಂಬಿಸಿಕೊಂಡಿದ್ದರು.

ಲತಾ ರಾಮ್‌ಗೋಬಿನ್ ಅವರು ಲಿನನ್ ಬಟ್ಟೆಯಿರುವ ಮೂರು ಕಂಟೇನರ್‌ಗಳನ್ನು ಹಡಗಿನ ಮೂಲಕ ಭಾರತದಿಂದ ತರಿಸಿಕೊಡುವುದಾಗಿ ಭರವಸೆ ನೀಡಿ 3.33 ಕೋಟಿ ರೂ. ಪಡೆದಿದ್ದರು. ಆದರೆ ಬಟ್ಟೆ ತರಿಸಲು ಹಣ ಪಾವತಿಸಿರುವುದಾಗಿ ನಕಲಿ ಬಿಲ್ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಲತಾ ರಾಮ್ ಗೋಬಿನ್ ವಿರುದ್ಧ 2015 ರಲ್ಲಿ ನ್ಯೂ ಆಫ್ರಿಕಾ ಅಲೈಯನ್ಸ್ ಫೂಟ್​ವೇರ್​ ಡಿಸ್ಟ್ರಿಬ್ಯುಟರ್ಸ್​ ಎಂಬ ಕಂಪನಿಯ ನಿರ್ದೇಶಕ ಮಹಾರಾಜ್​​ ವಂಚನೆ ಪ್ರಕರಣ ದಾಖಲಿಸಿದ್ದರು.

ಲತಾ ರಾಮ್‌ಗೋಬಿನ್ ಅವರನ್ನು ಈ ಹಿಂದೆ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದೀಗ ಅಪರಾಧ ಸಾಬೀತಾಗಿದ್ದರಿಂದ ಜೈಲು ಪಾಲಾಗಿದ್ದಾರೆ.

ಲತಾ ರಾಮ್‌ಗೋಬಿನ್ ಅವರ ತಾಯಿ ಎಲಾ ಗಾಂಧಿ ಅವರು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು. ಭಾರತ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಗೌರವಗಳನ್ನು ಸ್ವೀಕರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಾಮ್‌ಗೋಬಿನ್ ಸೋದರ ಸಂಬಂಧಿಗಳಾದ ಕೀರ್ತಿ ಮೆನನ್, ಉಮಾ ಧುಪೆಲಿಯಾ-ಮೆಸ್ತ್ರಿ ಹಾಗೂ ದಿವಂಗತ ಸತೀಶ್ ಧುಪೆಲಿಯಾ ಕೂಡ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img