Tuesday, June 15, 2021
Homeಕೋವಿಡ್-19ದೇಶದಲ್ಲಿ ಕೊರೊನಾ 2ನೇ ಅಲೆ ಭೀತಿ ಬೆನ್ನಲ್ಲೇ ಮತ್ತೊಂದು ಹೊಸ ಡೇಂಜರಸ್ ವೈರಸ್‌ ಪತ್ತೆ!

ಇದೀಗ ಬಂದ ಸುದ್ದಿ

ದೇಶದಲ್ಲಿ ಕೊರೊನಾ 2ನೇ ಅಲೆ ಭೀತಿ ಬೆನ್ನಲ್ಲೇ ಮತ್ತೊಂದು ಹೊಸ ಡೇಂಜರಸ್ ವೈರಸ್‌ ಪತ್ತೆ!

ಭಾರತದಲ್ಲಿ ಕೊರೊನಾವೈರಸ್‌ನ ಎರಡನೇ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೊಸ ಮಾದರಿಯ B.1.1.28.2 ಕೊರೊನಾವೈರಸ್‌ಅನ್ನು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಲಾಗಿದೆ.

ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ ಮಾಡಲಾಗಿದೆ.

ಹೊಸ ರೂಪಾಂತರಿ ದೇಹದ ತೂಕದ ಇಳಿಕೆಗೆ ಕಾರಣವಾಗಿದ್ದು ಶ್ವಾಸನಾಳದಲ್ಲಿ ಮತ್ತು ಶ್ವಾಸಕೋಶಕ್ಕೆ ಘಾಸಿಗೊಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. D614G ರೂಪಾಂತರಿಗಿಂತ ಹೆಚ್ಚಿನ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರೀಕ್ಷೆಗಳ ಆಧಾರದಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ವೈರಸ್ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿಯಷ್ಟೇ ತೀವ್ರತೆಯನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಮೊದಲಿಗೆ ಪತ್ತೆಯಾದ ‘ಆಲ್ಫಾ’ ರೂಪಾಂತರಿಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಸದ್ಯ ಭಾರತದಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ದೊಡ್ಡ ಪ್ರಮಾಣದಲ್ಲಿ ವೈರಸ್‌ನ ಹರಡುವಿಕೆಗೆ ಕಾರಣವಾಗಿದೆ. ಉಳಿದ ಎಲ್ಲಾ ರೂಪಾಂತರಿಗಿಂತ ಇದು ಹೆಚ್ಚಿನ ಹಾನಿಯುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img