Monday, June 14, 2021
Homeದೇಶಪೆಟ್ರೋಲ್ ಡೀಸೆಲ್ ದರ ಏರಿಕೆ ವಿರುದ್ಧ ಕಿಡಿಕಾರಿದ ರಾಹುಲ್

ಇದೀಗ ಬಂದ ಸುದ್ದಿ

ಪೆಟ್ರೋಲ್ ಡೀಸೆಲ್ ದರ ಏರಿಕೆ ವಿರುದ್ಧ ಕಿಡಿಕಾರಿದ ರಾಹುಲ್

ನವದೆಹಲಿ: ದೇಶದ ಹಲವೆಡೆ ದಿನದಿಂದ ದಿನಕ್ಕೆ ಏರುತ್ತಲೇ ಇರುವ ತೈಲಗಳ ಧರದ ಕುರಿತು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, ‘ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ನೀವೆಲ್ಲರೂ ಪೆಟ್ರೋಲ್ ಬಂಕ್‌ನಲ್ಲಿ ಬಿಲ್ ಪಾವತಿಸುವಾಗ, ಮೋದಿ ಸರ್ಕಾರ ಹಣದುಬ್ಬರ ಹೆಚ್ಚಿಸಿರುವುದನ್ನು ನೋಡುತ್ತೀರಿ. ತೆರಿಗೆ ಸಂಗ್ರಹದಂತಹ ಸಾಂಕ್ರಾಮಿಕದ ಅಲೆಗಳು ನಿರಂತರವಾಗಿ ಬರುತ್ತಿವೆ’ ಎಂದು ಹೇಳಿದ್ದಾರೆ.

ಕಳೆದ 13 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಪ್ರತಿ ಲೀಟರ್‌ಗೆ ಕ್ರಮವಾಗಿ ₹25.72 ಮತ್ತು ₹23.93 ರಷ್ಟು ಹೆಚ್ಚಾಗಿದೆ. ಇದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಹೆಚ್ಚುವರಿಯಾಗಿ ಲೂಟಿ ಮಾಡುತ್ತಿರುವ ಪ್ರಕ್ರಿಯೆ’ ಎಂದು ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ದೂರಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img