Tuesday, June 15, 2021
Homeಸುದ್ದಿ ಜಾಲಅಕ್ರಮವಾಗಿ ಮದ್ಯ ಸಾಗಾಟ : ಮೂವರು ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ಅಕ್ರಮವಾಗಿ ಮದ್ಯ ಸಾಗಾಟ : ಮೂವರು ಆರೋಪಿಗಳ ಬಂಧನ

ಬೆಂಗಳೂರು  : ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಶೇಖರಿಸಿ, ತಮಿಳುನಾಡಿಗೆ ಸಾಗಾಟ ಮಾಡುವ ವೇಳೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ದಾಳಿ ನಡೆಸಿ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯ ಬಳಿ ಅನುಮಾನಸ್ಪದವಾಗಿ ಕಂಡ ಎರಡು ಈಚರ್ ವಾಹನಗಳ ಮೇಲೆ ಪೋಲಿಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಅಕ್ರಮವಾಗಿ ಶೇಖರಣೆ ಮಾಡಿಟ್ಟುಕೊಂಡು ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದ ಮೂರು ಜನ ಅಸಾಮಿಗಳನ್ನ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಚಿನ್ನಸ್ವಾಮಿ(36), ಪೆರುಮಾಳ (25) ಹಾಗೂ ಪಾರ್ಥೀಬನ್(25) ಬಂಧಿತ ಆರೋಪಿಗಳಾಗಿದ್ದು, ಇವರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2,29,496 ರೂ ಮೌಲ್ಯದ ಮದ್ಯ, 1,50,000 ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಎರಡು ಈಚರ್ ವಾಹನಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕೋವಿಡ್ 19 ಹಿನ್ನೆಲೆ ತಮಿಳುನಾಡು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಹಾಗಾಗಿ ಕರ್ನಾಟಕ ರಾಜ್ಯದಿಂದ ಮದ್ಯವನ್ನು ಖರೀದಿಸಿ ಶೇಖರಣೆ ಮಾಡಿಟ್ಟುಕೊಂಡು ಅಕ್ರಮವಾಗಿ ತಮಿಳುನಾಡಿಗೆ ಕೊಂಡೊಯ್ದು ಹೆಚ್ಚು ಹಣಕ್ಕೆ ಮಾರಾಟ ಮಾಡಿ ಹಣ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಲು ಮುಂದಾಗಿದ್ದ ಅಸಾಮಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಜೊತೆಗೆ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img