Tuesday, June 15, 2021
Homeಅಂತರ್ ರಾಜ್ಯ14 ವರ್ಷದ ಬಾಲಕನೊಂದಿಗೆ ಲವ್ವಿ ಡವ್ವಿ ನಡೆಸಿ ಇದೀಗ ಪೊಲೀಸರ ಅತಿಥಿ ಆದ...

ಇದೀಗ ಬಂದ ಸುದ್ದಿ

14 ವರ್ಷದ ಬಾಲಕನೊಂದಿಗೆ ಲವ್ವಿ ಡವ್ವಿ ನಡೆಸಿ ಇದೀಗ ಪೊಲೀಸರ ಅತಿಥಿ ಆದ 2 ಮಕ್ಕಳ ತಾಯಿ!

ರಾಯ್ಪುರ: ಮದುವೆಯಾಗಿ ಎರಡು ಮುದ್ದಾದ ಮಕ್ಕಳಿರುವ ಮಹಿಳೆ 14 ವರ್ಷದ ಬಾಲಕನನ್ನೇ ಪ್ರೀತಿಸಿ ಆತನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಛತ್ತೀಸಗಢದ ಕೋರಬಾದದಲ್ಲಿ ನಡೆದಿದೆ. ಇದೀಗ ಇಬ್ಬರೂ ಸಿಕ್ಕಿ ಬಿದ್ದಿದ್ದು, ಮಹಿಳೆಯ ವಿರುದ್ದ ಪ್ರಕರಣ ದಾಖಲಾಗಿದೆ.

ಗಂಡ ಸರ್ಕಾರಿ ನೌಕರ. ಯಾವುದಕ್ಕೂ ಕೊರತೆಯಿಲ್ಲ ಎನ್ನುವಂತಹ ಕುಟುಂಬವದು. ಆದರೆ ಆ ಮಹಿಳೆಗೆ ಅದೇನಾಗಿತ್ತೋ ಏನೋ, 14 ವರ್ಷದ ಬಾಲಕನಿಗೇ ಪ್ರೇಮದ ಬಲೆ ಬೀಳಿಸಿದ್ದಳು. ಆತನೊಂದಿಗೇ ಬದುಕಬೇಕೆಂದು ಗಂಟು ಮೂಟೆ ಕಟ್ಟಿಕೊಂಡು ಆತನನ್ನು ಕರೆದುಕೊಂಡು ಓಡಿ ಹೋಗಿದ್ದಳು.

ಈ ವಿಚಾರವಾಗಿ ಎರಡೂ ಕುಟುಂಬಗಳ ಸದಸ್ಯರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು ಇವರಿಬ್ಬರ ಹುಡುಕಾಟ ಆರಂಭಿಸಿದ್ದಾರೆ. ಈ ಜೋಡಿ ಜಾಂಜಗೀರ ಚಂಪಾ ಪ್ರದೇಶದಲ್ಲಿ ಸುತ್ತಾಡುತ್ತಿದ್ದು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಅವರನ್ನು ವಾಪಸು ಕರೆದುಕೊಂಡು ಬಂದ ಪೊಲೀಸರು ಮಹಿಳೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್​ಐಆರ್​ ದಾಖಲಿಸಿದ್ದಾರೆ. ಬಾಲಕನನ್ನು ಆತನ ಮನೆಗೆ ವಾಪಸು ಕಳುಹಿಸಿಕೊಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img