Tuesday, June 15, 2021
Homeಸುದ್ದಿ ಜಾಲಸಮುದ್ರದಲ್ಲಿ ಸಿಕ್ಕ ಮೀನಿನಿಂದ ರಾತ್ರೋರಾತ್ರಿ ಲಕ್ಷಾಧೀಶ್ವರನಾದ ಯುವಕ.!

ಇದೀಗ ಬಂದ ಸುದ್ದಿ

ಸಮುದ್ರದಲ್ಲಿ ಸಿಕ್ಕ ಮೀನಿನಿಂದ ರಾತ್ರೋರಾತ್ರಿ ಲಕ್ಷಾಧೀಶ್ವರನಾದ ಯುವಕ.!

ಜೀವನದಲ್ಲಿ ಅದೃಷ್ಟ ಅನ್ನೋದು ಯಾರಿಗೆ, ಹೇಗೆ ಬರುತ್ತೆ ಅಂತ ಊಹೆ ಮಾಡೋದು ಬಹಳ ಕಷ್ಟ. ಆದರೆ ಕೆಲವರಿಗೆ ಒಲಿದು ಬರುವ ಅದೃಷ್ಟ ಮಾತ್ರ ಅವರ ಇಡೀ ಜೀವನದ ದಿಕ್ಕನ್ನು ಬದಲಾಯಿಸಬಲ್ಲದು ಅನ್ನೋದಿಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಇವೆ. ಇಂತಹ ಘಟನೆಗಳನ್ನು ನೋಡಿದಾಗ ನಾವು ನಮ್ಮ ಮನಸ್ಸಿನಲ್ಲಿ ಸಹಾ ಇಂತದೊಂದು ಅದೃಷ್ಟ ನಮಗೆ ಏಕೆ ಒಲಿದು ಬರಲಿಲ್ಲ ಅಂತ ಅಂದುಕೊಳ್ಳುತ್ತೇವೆ. ಆದರೆ ಅದೃಷ್ಟ ಒಲಿದು ಬಂದರೆ ನಿನ್ನೆಯವರೆಗೆ ಭಿಕಾರಿಯಾಗಿದ್ದವನು ಇಂದು ಕೋಟ್ಯಾಧಿಪತಿ ಆಗಿ ಬಿಡಬಹುದು. ಈಗ ಇಂತಹ ಒಂದು ಅದೃಷ್ಟ ಪಾಕಿಸ್ತಾ‌ನದ ಮೀನುಗಾರನ ಬದುಕಿನಲ್ಲಿ ಕೂಡಾ ಬಂದಿದೆ. ಅವರ ಅದೃಷ್ಟದ ಕಥೆಯನ್ನು ಕೇಳಿದಾಗ ಆಶ್ಚರ್ಯ ಸಹಾ ಆಗುತ್ತದೆ.‌

ಪಾಕಿಸ್ತಾನದ ಮೂಲದ ಮೀನುಗಾರನೊಬ್ಬ ತನ್ನ ಬಲೆಗೆ ಬಿದ್ದಂತಹ ಅಟ್ಲಾಂಟಿಕ್ ಕ್ರೋಕರ್ ಎನ್ನುವ ಅತಿ ವಿರಳವಾದ ಮೀನಿನ ಪ್ರಬೇಧದ ಮೀನನ್ನು ಹಿಡಿದಿದ್ದಾನೆ. ಈ ಮೀನಿನ ತೂಕ ಸುಮಾರು 48 ಕೆಜಿಗಳಷ್ಟು ತೂಕವನ್ನು ಹೊಂದಿತ್ತು ಎನ್ನಲಾಗಿದ್ದು, ಆತ ಈ ಮೀನನ್ನು ಬರೋಬ್ಬರಿ 72 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಮೀನಿನ ಮಾರಾಟವು ಪಾಕಿಸ್ತಾನದಲ್ಲೇ ಅತಿ ದುಬಾರಿಯಾದ ಸಮುದ್ರ ಆಹಾರ ವ್ಯವಹಾರ ಎನ್ನುವ ಹೆಗ್ಗಳಿಕೆಯನ್ನು ಈ ಮೀನಿನ ವ್ಯವಹಾರ ಪಡೆದುಕೊಂಡಿದೆ.

ಸಾಜಿದ್ ಹಜಿ ಅಬೂಬ್ಕರ್ ಎನ್ನುವ ಮೀನುಗಾರನ ಬಲೆಗೆ ಬಲೂಚಿಸ್ತಾನದ ಕರಾವಳಿ ಪ್ರದೇಶದಲ್ಲಿ ಈ ಮೀನು ಬಿದ್ದಿತ್ತು. ಈ ವಿಶೇಷವಾದ ಮೀನಿನ ಬೆಲೆ ಅದರ ಹರಾಜಿನಲ್ಲಿ 82 ಲಕ್ಷಗಳವರೆಗೆ ತಲುಪಿತ್ತು.. ಆದೇ ಅಬೂಬ್ಕರ್ ಸಂಪ್ರದಾಯದ ಪ್ರಕಾರ ಸಾಂಪ್ರದಾಯಿಕ ಬೆಲೆಗೆ ಅಂದರೆ 72 ಲಕ್ಷ ರೂಗಳನ್ನು ಸಾಜಿದ್ ಪಡೆದುಕೊಂಡಿದ್ದಾರೆ. ಅಟ್ಲಾಂಟಿಕ್ ಕ್ರೋಕರ್ ಸಿಕ್ಕಿರುವುದು ಇದೇ ಮೊದಲಲ್ಲ. ಕಳೆದ ವಾರ ಕೂಡಾ ಒಂದು ಮೀನು ಸಿದ್ದರು, ಅದು 7.8 ಲಕ್ಷ ಕ್ಕೆ ಮಾರಾಟವಾಗಿತ್ತು. ಸಾಮಾನ್ಯವಾಗಿ ಈ ಮೀನು 1.2 ಕೆಜಿ ತೂಕವಿರುತ್ತದೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img