Monday, June 14, 2021
Homeಅಂತರ್ ರಾಷ್ಟ್ರೀಯಅಫ್ಗಾನಿಸ್ತಾನ: ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟ, 11 ಮಂದಿ ಮೃತ

ಇದೀಗ ಬಂದ ಸುದ್ದಿ

ಅಫ್ಗಾನಿಸ್ತಾನ: ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟ, 11 ಮಂದಿ ಮೃತ

ಕಾಬೂಲ್: ವಾಯವ್ಯ ಆಫ್ಗಾನಿಸ್ತಾನದಲ್ಲಿ ರಸ್ತೆ ಬದಿಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿದಂತೆ 11 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿನಿವ್ಯಾನ್‌ ಕಂದಕಕ್ಕೆ ಉರುಳಿದ್ದು, ಬಳಿಕ ಸ್ಫೋಟಗೊಂಡಿತು. ಶವಗಳನ್ನು ಹೊರತೆಗೆಯುವ ಪ್ರಕ್ರಿಯೆ ನಡೆದಿದೆ ಎಂದು ಬಾದ್ಗಿ ಪ್ರಾಂತ್ಯದ ಗವರ್ನರ್‌ ಹೆಸಮುದ್ದೀನ್‌ ಶಾಮ್ಸ್ ಹೇಳಿದರು.

ಕೃತ್ಯದ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಬಾದ್ಗಿ ಪ್ರಾಂತ್ಯ ಸರ್ಕಾರವು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ತಾಲಿಬಾನ್ ಸಂಘಟನೆ ಬಾಂಬ್ ಅನ್ನು ವ್ಯಾನ್‌ನಲ್ಲಿ ಇರಿಸಿತ್ತು ಎಂದು ಆರೋಪಿಸಿದೆ.

ಯುದ್ಧಪೀಡಿತ ಆಫ್ಗಾನಿಸ್ತಾನದಲ್ಲಿ ಬಾಂಬ್‌ ಸ್ಫೋಟ ಪ್ರಕರಣ ಸಾಮಾನ್ಯ. ಸರ್ಕಾರದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಇಂಥ ಕೃತ್ಯ ನಡೆಯುತ್ತಿದ್ದು, ಆಗಾಗ್ಗೆ ನಾಗರಿಕರು ಇದಕ್ಕೆ ಬಲಿಯಾಗುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img