Tuesday, June 15, 2021
Homeಸುದ್ದಿ ಜಾಲಶಾಸಕ ಸುವೇಂದು ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಇದೀಗ ಬಂದ ಸುದ್ದಿ

ಶಾಸಕ ಸುವೇಂದು ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಕೊಲ್ಕತ್ತಾ, ಜೂ.6- ಕೇಂದ್ರ ಸರ್ಕಾರದ ಜೊತೆ ಜಿದ್ದಾಜಿದ್ದಿನ ರಾಜಕೀಯಕ್ಕಿಳಿದಿರುವ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತೀಚೆಗಷ್ಟೆ ಬಿಜೆಪಿ ಸೇರಿ ಚುನಾಯಿತರಾಗಿರುವ ಶಾಸಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೆಂದು ಅಧಿಕಾರಿ ವಿರುದ್ಧ ಕಳ್ಳತನದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಕಂಟೈ ನಗರಸಭೆಯ ಸದಸ್ಯ ರತ್ನದೀಪ್ ಮನ್ನಾ ಅವರು ಮೇ 29ರಂದು ಈಸ್ಟ್ ಮಿಡ್ನಪೂರೆ ಪೊಲೀಸ್ ಠಾಣೆಗೆ ನೀಡಿರುವ ದೂರು ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹಿಮಾಂಶು, ಮನ್ನ, ಪ್ರತಾಪ್ ಅವರು ಕೇಂದ್ರ ಸಶಸ್ತ್ರ ಮೀಸಲು ಪಡೆಯ ರಕ್ಷಣೆಯೊಂದಿಗೆ ಬಂದು ಟಾರ್ಪಲ್ ತುಂಬಿದ ಟ್ರಕ್ ಅನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು,

ಶಾಸಕ ಸುವೇಂದು ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ಆರೋಪಿಗಳ ಕೃತ್ಯಕ್ಕೆ ಶಾಸಕ ಸುವೆಂದು ಅಧಿಕಾರಿ ಮತ್ತು ಸೌಮೆಂದು ಅಧಿಕಾರಿ ಕುಮ್ಮಕ್ಕು ನೀಡಿದ್ದಾರೆ ಎಂಬ ದೂರು ಆಧರಿಸಿ ಐಪಿಸಿ ಸೆಕ್ಷನ್ 448, 379, 409, 120ಬಿ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಾಪ್ ಡೆ ಎಂಬಾತನ್ನು ಬಂಧಿಸಿ ಪೊಲೀಸರು ವಿಚಾರನೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನೆರೆ ಸಂತ್ರಸ್ಥರಿಗೆ ನೀಡಲು ಶೇಖರಿಸಲಾಗಿದ್ದ ಟಾರ್ಪಲ್ ಗಳನ್ನು ಪ್ರತಾಪ್ ಮತ್ತು ಸಂಗಡಿಗರು ಶಾಸಕರ ಕುಮ್ಮಕ್ಕಿನ ಮೇರೆಗೆ ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img