Monday, June 14, 2021
Homeಜಿಲ್ಲೆಬೆಳಗಾವಿಬೆಳಗಾವಿಯಲ್ಲಿ ಭಾರತಿ ಪೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

ಇದೀಗ ಬಂದ ಸುದ್ದಿ

ಬೆಳಗಾವಿಯಲ್ಲಿ ಭಾರತಿ ಪೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

ಬೆಳಗಾವಿ : ಕಾಡು ಬೆಳಸಿ ನಾಡು ಉಳಿಸಿ ಎಲ್ಲರಿಗೂ ಒಳ್ಳೆ ಗಾಳಿ ದೊರಕಿಸುವ ಉದ್ದೇಶದಿಂದ ಬೆಳಗಾವಿ ನಗರದ KSRTC ವಸತಿಗೃಹ ಕಂಪೌಂಡ್ (ದಂಡು ಮಂಡಳಿ ವ್ಯಾಪ್ತಿಯಲ್ಲಿ) ಬಳಿ ಗಿಡ ಸಸಿಗಳನ್ನು ಭಾರತಿ ಪೌಂಡೇಶನ್ ಮತ್ತು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯ ಸಿಪಿಐ,ಪಿಎಸ್ಐ ಇವರಿಂದ ಸಸಿ ನೆಡಲಾಯಿತು.

ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಿಡಗಳನ್ನು ಹಚ್ಚುವ ಮೂಲಕ ಪರಿಸರ ದಿನಾಚರಣೆ ಮಾಡಿ ಇದರಿಂದ ನಮ್ಮ ದೇಶದಲ್ಲಿ ಎಲ್ಲರು ಒಳ್ಳೆ ಗಾಳಿ ಪಡೆಯಲಿ ಎಂದು ಪರಿಸರ ದಿನಾಚರಣೆ ನಿಮಿತ್ತವಾಗಿ ನಗರದ KSRTC ವಸತಿಗೃಹ ಕಂಪೌಂಡ್ (ದಂಡು ಮಂಡಳಿ ವ್ಯಾಪ್ತಿಯಲ್ಲಿ) ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ ಇವರಿಂದ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆ ಮಾಡಿದರು.

ವಿಶ್ವ ಪರಿಸರ ದಿನಾಚರಣೆ ಬಗ್ಗೆ ಮಾತನಾಡಿದ ಇವರುಪ್ರತಿ ಒಬ್ಬರು ಅವರವರ ಮನೇಯ ಮುಂದೆ ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸಿ ನಮಗೆ ನೈಸರ್ಗಿಕ ಆಕ್ಸಿಜನ್  ಹೆಚ್ಚು ಸಿಗುವುದು. ಇಲ್ಲವಾದರೇ ಮುಂದೆ ಒಂದು ದಿನ ಪ್ರತಿ ಒಬ್ಬರು ತಮ್ಮ ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಹಚ್ಚಿ ಕೊಂಡು ಬದುಕಬೇಕಾದ ಸಂದರ್ಭ ಬರುತ್ತದೆ ಆದಕಾರಣ ಪ್ರತಿ ಒಬ್ಬರು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷೀಸೋಣ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಭಾರತಿ ಪೌಂಡೇಶನ್  ಪದಾಧಿಕಾರಿಗಳುಮತ್ತು ಸದಸ್ಯರು ಬೆಳಗಾವಿ ಮಾರ್ಕೆಟ ಪೋಲಿಸ್ ಠಾಣೆಯ ಸಿಪಿಐ ಶ್ರೀನಿವಾಸ , ಪಿಎಸ್ಐ ವಿಠ್ಠಲ ಯಾದವಾಡ  ಮತ್ತು ಹವಾಲ್ದಾರ್ ಮೈಲಾಕಿ,ಸಿದ್ರಾಯಿ ಶಿಗಿಹಳ್ಳಿ, ಹಾಗೂ ಇನ್ನಿತರರು ಸದಸ್ಯರು ಉಪಸ್ಥಿತರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img