Monday, June 14, 2021
Homeಸುದ್ದಿ ಜಾಲಕೆಲವೇ ದಿನಗಳಲ್ಲಿ ಪೈಲಟ್ ಆಗಬೇಕಿದ್ದ ಕರ್ನಾಟಕದ ಯುವಕನ ದುರಂತ ಅಂತ್ಯ

ಇದೀಗ ಬಂದ ಸುದ್ದಿ

ಕೆಲವೇ ದಿನಗಳಲ್ಲಿ ಪೈಲಟ್ ಆಗಬೇಕಿದ್ದ ಕರ್ನಾಟಕದ ಯುವಕನ ದುರಂತ ಅಂತ್ಯ

ಸುಂಟಿಕೊಪ್ಪ: ಭವಿಷ್ಯದಲ್ಲಿ ಪೈಲೆಟ್ ಆಗಬೇಕೆಂಬ ಕನಸು ಹೊತ್ತಿದ್ದ ಸುಂಟಿಕೊಪ್ಪ ಸಮೀಪದ ಮಾದಾಪುರದ ಜಂಬೂರುಬಾಣೆಯ ಯುವಕ ಗುಜರಾತಿನ ಅಹಮದಾಬಾದ್ ನಲ್ಲಿ ಜೂ.4ರಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಸುಂಟಿಕೊಪ್ಪ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಪಯ್ಯ ಮತ್ತು ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪೊನ್ನಮ್ಮ ಅವರ ಪುತ್ರ ಶಿಬಿ ಬೋಪಯ್ಯ(23) ಆತ್ಮ ಹತ್ಯೆಗೆ ಶರಣಾದ ಯುವಕ.

ಗುಜರಾತಿನ ಅಹಮದಾಬಾದ್ ನಲ್ಲಿ ಏರೋನಾಟಿಕ್ ಸೆಂಟರ್ ನಲ್ಲಿ ತರಬೇತಿ ಕೇಂದ್ರದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಶಿಬಿ ಬೋಪಯ್ಯ ಇನ್ನೇನು 3 ತಿಂಗಳಲ್ಲಿ ತರಬೇತಿ ಮುಗಿಸಿ ಭವಿಷ್ಯದ ಪೈಲಟ್ ಆಗುವ ಕನಸು ಹೊತ್ತಿದ್ದನು. ಆದರೆ ಶುಕ್ರವಾರ ಸೆಂಟರ್ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ‌ ನೇ ಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮೇ ತಿಂಗಳಲ್ಲೇ ತರಬೇತಿ ಅಂತ್ಯವಾಗಿ ಈತ ಪೈಲೆಟ್ ಆಗಿ ಹೊರ ಬರಬೇಕಿತ್ತು. ಆದರೆ ಲಾಕ್​ಡೌನ್​ ಕಾರಣದಿಂದಾಗಿ ತರಬೇತಿ ಅವಧಿಯೂ ಮುಂದೂಡಿಕೆಯಾಗಿತ್ತು. ಹಾಗಾಗಿ ತರಬೇತಿ ಮುಗಿಯಲೂ ಇನ್ನೂ ಎರಡು ತಿಂಗಳಷ್ಟೇ ಬಾಕಿ ಉಳಿದಿತ್ತು. ತರಬೇತಿ ಮುಗಿಸಿ ಆದಷ್ಟು ಬೇಗನೆ ಬರುವುದಾಗಿ ತಮ್ಮ ಪೋಷಕರ ಜೊತೆ ಹೇಳುತ್ತಿದ್ದನಂತೆ. ಪ್ರತಿದಿನ ರಾತ್ರಿ ಊಟದ ಬಳಿಕ ತಂದೆ ತಾಯಿ ಜೊತೆ ವೀಡಿಯೋಕಾಲ್ ಮಾಡಿ ಮಾತನಾಡಿಯೇ ಮಲಗುತ್ತಿದ್ದನಂತೆ.

ಈಗಾಗಲೇ ಮನೆಯವರು ಗುಜರಾತಿಗೆ ಪ್ರಯಾಣ ಬೆಳೆಸಿದ್ದಾರೆ. ನೇಣು ಸ್ಥಿತಿಯಲ್ಲಿರುವ ಯುವಕನ ಕಿವಿಯಲ್ಲಿ ಇಯರ್ ಪೋನ್, ವಾಚ್, ಶೂ ಧರಿಸಿರುವುದು ಕಂಡು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img