Tuesday, June 15, 2021
Homeಸುದ್ದಿ ಜಾಲಯಾರಿಗೂ ಹೇಳದೆ 4 ವರ್ಷದ ಹಾಗೂ 4 ತಿಂಗಳ ಮಕ್ಕಳ ಜೊತೆ ಮನೆಯಿಂದ ಹೊರಟ ದಂಪತಿಯ...

ಇದೀಗ ಬಂದ ಸುದ್ದಿ

ಯಾರಿಗೂ ಹೇಳದೆ 4 ವರ್ಷದ ಹಾಗೂ 4 ತಿಂಗಳ ಮಕ್ಕಳ ಜೊತೆ ಮನೆಯಿಂದ ಹೊರಟ ದಂಪತಿಯ ದುರಂತ ಅಂತ್ಯ

ವಿಜಯವಾಡ: ದಂಪತಿ ಮತ್ತು ಮಕ್ಕಳಿಬ್ಬರ ಮೃತ ದೇಹ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಿ. ಕುಡೂರು ವಲಯದಲ್ಲಿ ಬರುವ ಸಗಿಲೇರು ಜಲಾಶಯದಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಮೃತ ದೇಹಗಳು ಪತ್ತೆಯಾಗಿವೆ. ಹತ್ತಿರದ ಗ್ರಾಮಸ್ಥರು ಜಲಾಶಯದಲ್ಲಿ ಶವ ಗಳು ತೇಲುತ್ತಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮೃತ ದೇ‌ಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಪೊರುಮಾಮಿಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆಯ ಬಳಿಕ ಮೃತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರನ್ನು ಬಳ್ಳಾರಿ ರಾಮಕೃಷ್ಣ (43), ಪತ್ನಿ ಅನುಷಾ (35) ಮತ್ತು ಮಕ್ಕಳಾದ ನಿಖಿಲ್​ (4) ಹಾಗೂ ಕಲ್ಯಾಣ್​ (4 ತಿಂಗಳು) ಎಂದು ಗುರುತಿಸಲಾಗಿದೆ. ಮೃತರು ಪೊರುಮಾಮಿಲಾದ ಶ್ರೀರಾಮನಗರ ಕಾಲನಿಯ ನಿವಾಸಿಗಳು. ರಾಮಕೃಷ್ಣ, ಪಾಲಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಕೆಲ ಮಹತ್ವದ ಮಾಹಿತಿಗಳು ಬಯಲಾಗಿವೆ.

ಗುರುವಾರ ಮಧ್ಯಾಹ್ನ ರಾಮಕೃಷ್ಣ ಮತ್ತು ಅನುಷಾ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟರು ಎಂದು ರಾಮಕೃಷ್ಣ ತಂದೆ ಹೇಳಿಕೆ ನೀಡಿದ್ದಾರೆ. ಅದಾದ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ದೂರಕಲಿಲ್ಲ. ಫೋಟೋ ನೋಡಿದ ಮೇಲೆಯೇ ಅವರ ಬಗ್ಗೆ ಗೊತ್ತಾಗಿದ್ದು ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಮಕೃಷ್ಣ ಫೈನಾನ್ಸ್​ ವ್ಯವಹಾರ ನಡೆಸುತ್ತಿದ್ದರು. ಅತ್ಯಧಿಕ ಸಾಲವಾಗಿದ್ದರಿಂದ ಹೆದರಿ ಮೃತ ಪಟ್ಟಿದ್ದಾರೆಂದು ತಿಳಿದುಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img