Tuesday, June 15, 2021
Homeಜಿಲ್ಲೆದಿನಗೂಲಿ ಕಾರ್ಮಿಕರು, ಬಡವರಿಗೆ ಆಹಾರ ಪೊಟ್ಟಣ ನೀಡಿ ಮಾನವೀಯತೆ ಮೆರೆದ :ಬಾಲಾಜಿ ಗ್ರೂಪ್’

ಇದೀಗ ಬಂದ ಸುದ್ದಿ

ದಿನಗೂಲಿ ಕಾರ್ಮಿಕರು, ಬಡವರಿಗೆ ಆಹಾರ ಪೊಟ್ಟಣ ನೀಡಿ ಮಾನವೀಯತೆ ಮೆರೆದ :ಬಾಲಾಜಿ ಗ್ರೂಪ್’

ಬೆಳಗಾವಿ : ಲಾಕ್ ಡೌನ್ ನಿಂದ ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿರುವರು ಅಂದರೆ ಅದು ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನ, ಸರ್ಕಾರ ವಿವಿಧ ಪ್ಯಾಕೇಜ್ ಘೋಷಿಸಿದರು ಕೂಡ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕೈಗೆ ಅದು ತಲುಪುತ್ತಿಲ್ಲ, ಇಂತಹ ಸಮಯದಲ್ಲಿ ತುತ್ತು ಅನ್ನಕ್ಕೆ ಶ್ರಮದಾನ ನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಬಡ ವರ್ಗದ ಜನರಿಗೆ ಶ್ರೀ ಬಾಲಾಜಿ ಗ್ರೂಪ್ ಆಹಾರ ಪೊಟ್ಟಣ ಹಾಗೂ ದಿನಸಿ ಸಾಮಗ್ರಿ ನೀಡಿ ಸಹಾಯ ಹಸ್ತ ಚಾಚಿದೆ

ಬೆಳಗಾವಿ ಜಿಲ್ಲೆಯ ನೂರಾರು ಜನರಿಗೆ ಆಹಾರ ಕಿಟ್ ಹಾಗೂ ಆಹಾರ ಪೊಟ್ಟಣಗಳನ್ನ ಪರಿಶುದ್ಧವಾಗಿ ಪ್ಯಾಕ್ ಮಾಡಿ ತಾವೇ ಸ್ವತಃ ಜನರ ಮದ್ಯೆ ತೆರಳಿ ಶ್ರೀ ಬಾಲಾಜಿ ಗ್ರೂಪ್ ನ ಶ್ರೀಮತಿ ಸ್ವರ್ಣ ಆದಿತ್ಯ ಹಾಗೂ ತಂಡದವರು ಅವಶ್ಯಕತೆ ಇರುವರಿಗೆ ದಿನಸಿ ಕಿಟ್ ನೀಡಿದ್ದಾರೆ, ಶ್ರೀ ಬಾಲಾಜಿ ಗ್ರೂಪ್ ನ ಕಾರ್ಯಕ್ಕೆ ಕೂಲಿ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದು , ಮನತುಂಬಿ ಹಾರೈಸಿದ್ದಾರೆ.

ಹಿಂದಿನಿಂದಲೂ ಕೂಡ ಶ್ರೀ ಬಾಲಾಜಿ ಗ್ರೂಪ್ ಜನರ ಸಂಕಷ್ಟದಲ್ಲಿ ಭಾಗಿಯಾಗುತ್ತಲೇ ಬಂದಿದೆ,ಸದ್ಯ ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ಬೆಳಗಾವಿ ಹೀಗೆ ಎಲ್ಲ ಕಡೆಯೂ ತಮ್ಮ ಕೈಲಾದ ಸೇವೆಯನ್ನ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ ಅಲ್ಲದೆ ಎಲ್ಲರಿಗೂ ಮಾದರಿಯಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img