Tuesday, June 15, 2021
Homeಸುದ್ದಿ ಜಾಲಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ!

ಇದೀಗ ಬಂದ ಸುದ್ದಿ

ಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ!

 ಭುವನೇಶ್ವರ್​: ಅತ್ತೆ-ಮಾವ ಅಂದರೆ ಮೂಗು ಮುರಿಯುವಂತಹ ಈ ಕಾಲದಲ್ಲಿ ಇಲ್ಲೊಬ್ಬ ಮಹಿಳೆ ಕೊರೊನಾ ಚಿಕಿತ್ಸೆಗಾಗಿ ತನ್ನ ಮಾವನ್ನು ಹೊತ್ತು ಸಾಗುವ ಮೂಲಕ ಮಾನವೀಯತೆ ಜತೆಗೆ ಸಂಬಂಧಗಳ ಮೌಲ್ಯಗಳನ್ನು ಸಾರಿದ್ದಾರೆ.

ಪತಿ ಸೂರಜ್​ ಕೆಲಸದ ನಿಮಿತ್ತ ಹೊರ ಹೋಗಿದ್ದಾರೆ. ಹೀಗಾಗಿ ಇಡೀ ಮನೆಯ ಜವಬ್ದಾರಿ ಇದೀಗ ಸೂರಜ್​ ಪತ್ನಿ ನಿಹಾರಿಕ ಮೇಲೆ ಬಿದ್ದಿದೆ. ಹೀಗಿರುವಾಗ ಇತ್ತೀಚೆಗೆ ಮಾವ ತುಳೆಶ್ವರ್​ ದಾಸ್​ಗೆ ಕೊರೊನಾ ಸೋಂಕು ತಗುಲಿದೆ. ಇತ್ತ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಏನು ಮಾಡುವುದು ಗೊಂದಲಕ್ಕೀಡಾದ ನಿಹಾರಿಕ ಮರುಗಳಿಗೆ ತಾನೇ ಮಾವನನ್ನು ಹೊತ್ತುಕೊಂಡ ಕೋವಿಡ್​ ಸೆಂಟರ್​ಗೆ ತೆರಳಿದ್ದಾರೆ.

ತುಳೇಶ್ವರ್​ ದಾಸ್​ಗೆ 75 ವರ್ಷ ವಯಸ್ಸಾಗಿದೆ. ಈತ ರಹಾದಲ್ಲಿರುವ ಭಟಿಂಗಾವ್ ಮೂಲದ ನಿವಾಸಿ. ಹತ್ತಿರದ ಕೋವಿಡ್​ ಕೇರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಪಾಸಿಟಿವ್​ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೋವಿಡ್​ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಾವನನ್ನು ಆಸ್ಪತ್ರೆಗೆ ದಾಖಲಿಸಿದ ಸೊಸೆ ನಿಹಾರಿಕಳನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ. ಆದರೆ, ಮಾವನೊಬ್ಬನನ್ನೇ ಕೋವಿಡ್​ ಕೇಂದ್ರಕ್ಕೆ ಕಳುಹಿಸಲು ನಿಹಾರಿಕ ನಿರಾಕರಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್​ ಮಾಡಿ ಇಬ್ಬರನ್ನು ಕೋವಿಡ್​ ಆಸ್ಪತ್ರೆಗೆ ಕಳುಹಿಸಿದ್ದಾರೆ.

ತನ್ನ ಪ್ರಾಣವನ್ನು ಲೆಕ್ಕಿಸದೇ ಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದ ನಿಹಾರಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 

 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img