Monday, June 14, 2021
Homeಸುದ್ದಿ ಜಾಲಒಂದು ಗಂಟೆಯ ಕಾಲ ಎಡ ಬಿಡದೆ ಸುರಿದ ಮಳೆ : ವಾಹನ ಸವಾರರ ಪರದಾಟ

ಇದೀಗ ಬಂದ ಸುದ್ದಿ

ಒಂದು ಗಂಟೆಯ ಕಾಲ ಎಡ ಬಿಡದೆ ಸುರಿದ ಮಳೆ : ವಾಹನ ಸವಾರರ ಪರದಾಟ

ಕೋಲಾರ :  ಕಳೆದ ನಾಲ್ಕೈದು ದಿನಗಳಿಂದ ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದ ಜಿಲ್ಲೆಯ ಜನತೆಗೆ ಸಂಜೆ ಸುರಿದ ಒಂದು ಗಂಟೆಯ ಮಳೆಯು ತಂಪನ್ನು ತಂದು ಕೊಟ್ಟಿತು.

ಆದರೆ ಲೋಕೋಪಯೋಗಿ ಇಲಾಖೆಯಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆಗಳು ಹಾಗೂ ನಗರ ಸಭೆಯ ಕಸ ತೆಗೆಯದ ಮೋರಿಗಳಿಂದ ತುಂಬಿದ ನೀರಿನಿಂದ ಮೋರಿಯ ಹಾಗೂ ಮ್ಯಾನ್ ಹೋಲ್ಗಳಲ್ಲಿನ ಗಲೀಜು ನೀರೆಲ್ಲಾ ರಸ್ತೆಗಳಿಗೆ ಬಂದು ನಡೆಯಲೂ ಆಗದಂತಾಗಿತ್ತು.  ಲೋಕೋಪಯೋಗಿ ಇಲಾಖೆಗೆ ಸೇರಿದ ಬಹುತೇಕ ರಸ್ತೆಗಳು ಕಳೆದ ಆರು ತಿಂಗಳಿನಿಂದ ಕನಿಷ್ಠ ತೇಪೆಯನ್ನು ಕಾಣದೇ ಇಂದು ಸುರಿದ ಮಳೆಯಿಂದ ಕಾರುಗಳು ಮತ್ತು ವಾಹನಗಳೆಲ್ಲಾ ನೆಲ ಕಚ್ಚಿದವು. ವಾಹನಗಳ ಸವಾರರಂತೂ  ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಲೇ  ಸಂಚರಿಸುತ್ತಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img