Tuesday, June 15, 2021
Homeಅಂತರ್ ರಾಜ್ಯಜುಲೈ 31ರೊಳಗೆ ರಾಜ್ಯದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ :ಪ್ರಮೋದ್ ಸಾವಂತ್

ಇದೀಗ ಬಂದ ಸುದ್ದಿ

ಜುಲೈ 31ರೊಳಗೆ ರಾಜ್ಯದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ :ಪ್ರಮೋದ್ ಸಾವಂತ್

ಪಣಜಿ : ಗೋವಾದಲ್ಲಿ ಜುಲೈ 31 ರೊಳಗೆ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರಪ್ರಥಮವಾಗಿ ಕೋವಿಡ್ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಪೂರ್ಣಗೊಳಿಸುವತ್ತ ಸರ್ಕಾರ ಲಕ್ಷ್ಯ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ ಸೋಂಕಿನ ಹೊಸ ಪ್ರಕರಣ್ಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು ಹಾಗೂ ಸಾವಿನ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ. ಸಂಭವನೀಯ ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ಇದುವರೆಗೆ ರಾಜ್ಯದಲ್ಲಿ 3,37,774 ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. 96,501 ಜನರಿಗೆ ಲಸಿಕೆಯ ಎರಡೂ ಡೋಸ್ ನೀಡಲಾಗಿದೆ. ರಾಜ್ಯಕ್ಕೆ ಇದುವರೆಗೂ 7,31,720 ಡೋಸ್ ಲಸಿಕೆ ಬಂದಿದ್ದು, ಇದನ್ನು ರಾಜ್ಯದ ಜನತೆಗೆ ಪ್ರಾಮುಖ್ಯತೆಗನುಗುಣವಾಗಿ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img