Monday, June 14, 2021
Homeಅಂತರ್ ರಾಜ್ಯಡ್ರಗ್ಸ್ ಪ್ರಕರಣ: ನಟ ಸುಶಾಂತ್ ಗೆಳೆಯ ಸಿದ್ಧಾರ್ಥ್ ಪಿಥಾನಿಗೆ 14 ದಿನ ನ್ಯಾಯಾಂಗ...

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ: ನಟ ಸುಶಾಂತ್ ಗೆಳೆಯ ಸಿದ್ಧಾರ್ಥ್ ಪಿಥಾನಿಗೆ 14 ದಿನ ನ್ಯಾಯಾಂಗ ಬಂಧನ

ನವದೆಹಲಿ: ಬಾಲಿವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವ್ರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಕಳೆದ ವರ್ಷ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವ್ರ ನಿಧನದ ನಂತ್ರ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ ಸಿಬಿ) ಪ್ರಾರಂಭಿಸಿದ ಡ್ರಗ್ಸ್ ತನಿಖೆಗೆ ಸಂಬಂಧಿಸಿದಂತೆ ಇಂದು ಸಿದ್ಧಾರ್ಥ್ ಪಿಥಾನಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ

ಮೇ 24ರಂದು ಎನ್ ಸಿಬಿ ಹೈದರಾಬಾದ್ʼನಿಂದ ಸಿದ್ಧಾರ್ಥ್ ಪಿಥಾನಿಯನ್ನ ಬಂಧಿಸಿತ್ತು ಮತ್ತು ತೆಲಂಗಾಣ ರಾಜಧಾನಿಯ ನ್ಯಾಯಾಲಯದಿಂದ ಪಡೆದ ಟ್ರಾನ್ಸಿಟ್ ವಾರಂಟ್ ಮೇಲೆ ಅವರನ್ನ ಮುಂಬೈಗೆ ಕರೆತರಲಾಯಿತು. ಅಮೇಲೆ ಆತನನ್ನ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸಧ್ಯ ನ್ಯಾಯಾಲಯ ಆತನನ್ನ ಸಿದ್ಧಾರ್ಥನನ್ನ ಜೂನ್‌ 1ರವರೆಗೆ ಎನ್ ಸಿಬಿ ಕಸ್ಟಡಿಗೆ ಒಪ್ಪಿಸಿದೆ.

ಸಿದ್ಧಾರ್ಥ್ ಪಿಥಾನಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತರಾಗಿದ್ದರು ಮತ್ತು ಅವರೊಂದಿಗೆ ಉಪನಗರ ಮುಂಬೈನ ಬಾಂದ್ರಾ ನಿವಾಸದಲ್ಲಿ ತಂಗಿದ್ದರು ಎಂದು ಎನ್ ಸಿಬಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿ.ಟಿ.ಐ. ಉಲ್ಲೇಖಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img