Monday, June 14, 2021
Homeಸುದ್ದಿ ಜಾಲಬೆಡ್ ದಂಧೆ ಆಯ್ತು, ಈಗ ವ್ಯಾಕ್ಸಿನ್ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊರಟ ನೀಚ ಸರ್ಕಾರ :...

ಇದೀಗ ಬಂದ ಸುದ್ದಿ

ಬೆಡ್ ದಂಧೆ ಆಯ್ತು, ಈಗ ವ್ಯಾಕ್ಸಿನ್ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊರಟ ನೀಚ ಸರ್ಕಾರ : ಸಂಸದ ಡಿಕೆ ಸುರೇಶ್ ವಾಗ್ದಾಳಿ

ಬೆಂಗಳೂರು : ಬಿಜೆಪಿ ಸರ್ಕಾರ ಬೆಡ್ ದಂಧೆಯನ್ನ ನಡೆಸಿದ್ದು ಆಯ್ತು ಈಗ ವ್ಯಾಕ್ಸಿನ್ ಲಸಿಕೆಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊರಟಿದ್ದು, ಜನರಿಗೆ ನೆಮ್ಮದಿ ಕೊಡದ ನೀಚ ಸರ್ಕಾರ ಎಂದು ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಎನಬಲರ್ಸ್ ಯುನೈಟೆಡ್ ಹಾಗೂ ಖಾಸಗಿ ಕಂಪನಿಗಳ ಸಹಕಾರದೊಂದಿಗೆ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿಕೆ ಸುರೇಶ್, ಬಿಜೆಪಿ ಸರ್ಕಾರ ಇಷ್ಟು ದಿನ ಬೆಡ್ ದಂಧೆಯನ್ನ ನಡೆಸಿದ್ದು ಆಯ್ತು, ಈಗ ವ್ಯಾಕ್ಸಿನ್ ಲಸಿಕೆಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ.

ವ್ಯಾಕ್ಸಿನೇಷನ್‌ ವಿಚಾರವಾಗಿ ಸರ್ಕಾರ ಉಳ್ಳವರ ಪರ ಕೆಲಸ ಮಾಡಿ ಗ್ರಾಮೀಣ ಭಾಗದ ಬಡ ಹಳ್ಳಿ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಅವರಿಗೆ ಬೇಕಾದವರಿಗೆ ವ್ಯಾಕ್ಸಿನ್ ನೀಡಿ ವ್ಯಾಪಾರ ಮಾಡುವಂತ ಕೆಲಸವಾಗುತ್ತಿದೆ.

ಸರ್ಕಾರ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದ್ದು, ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿ ಸಾರ್ವಜನಿಕರಿಗೆ ಲಸಿಕೆ ಸಿಗುವಂತೆ ಮಾಡಬೇಕಿದೆ. ಅದಲ್ಲದೇ ಸಿಬಿಎಸ್ಸಿ ಪರೀಕ್ಷೆ ಬೇಡ ಎಂದು ಕೇಂದ್ರ ಸರ್ಕಾರ ಹೇಳಿ ಮೂರು ದಿನವಾಗಿದೆ ಆದ್ರೆ ರಾಜ್ಯ ಸರ್ಕಾರ ಇನ್ನೂ ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇವರ ಬಳಿ ಅದು ಯಾವ ಪಂಡಿತರು ಹಾಗೂ ಸರ್ವಜ್ಞರು ಇದ್ದರೋ ಗೊತ್ತಿಲ್ಲ.

ಬಿಜೆಪಿಯವರು ಜನರನ್ನ ಸಾಯಿಸಿದ್ದು ಆಯ್ತು, ಜನರ ಜೋಬಿನಲ್ಲಿ ಹಣ ಇಲ್ಲದೆ ಮಾಡಿದ್ದು ಆಗಿದೆ. ಮನೆಯ ಮಕ್ಕಳಿಗೆ ಹಾಗೂ ಕುಟುಂಬದವರಿಗೆ ನೆಮ್ಮದಿಯನ್ನು ಕೊಡಲು ಯೋಗ್ಯತೆ ಇಲ್ಲದ ನೀಚ ಸರ್ಕಾರವಾಗಿ ಪ್ರಚಾರಕ್ಕಾಗಿಯೇ ನಡೆಯುತ್ತಿರುವ ಸರ್ಕಾರ ಅದು ಬಿಜೆಪಿ ಸರ್ಕಾರ, ಯಾವುದೇ ಕೆಲಸ ಮಾಡಬೇಕಂದ್ರು ಪ್ರಚಾರ ಹಾಗೂ ಲಾಭಕ್ಕಾಗಿ ಮಾಡುತ್ತಿದ್ದಾರೆ. ಜನರ ಸಾವು, ನೋವು ಈಗ ಬೂದಿಯನ್ನ ಬಿಡುವುದರಲ್ಲೂ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆಂದು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಾಮಂಡಲರಾದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img