Monday, June 14, 2021
Homeಜಿಲ್ಲೆಮೈಸೂರುDC ರೋಹಿಣಿ ಸಿಂಧೂರಿಯಿಂದ ಕಿರುಕುಳ : ರಾಜೀನಾಮೆಗೆ ಮುಂದಾದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ

ಇದೀಗ ಬಂದ ಸುದ್ದಿ

DC ರೋಹಿಣಿ ಸಿಂಧೂರಿಯಿಂದ ಕಿರುಕುಳ : ರಾಜೀನಾಮೆಗೆ ಮುಂದಾದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದ್ದು, ಈ ನಡುವೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಶಿಲ್ಪಾನಾಗ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಅವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದು, ವೈಯುಕ್ತಿಕವಾಗಿ ಟಾರ್ಗೆಟ್‌ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನ ಶಿಲ್ಪಾನಾಗ್‌ ಅವರು ಮಾಡಿದ್ದು, ಪ್ರತಿ ದಿನ ನಮ್ಮ ಅಧಿಕಾರಿಗಳ ಸಭೆಯನ್ನು ಕರೆದು ಅವಮಾನ ಮಾಡುತ್ತಿದ್ದಾರೆ, ಇದರಿಂದ ನನಗೆ ಬೇಸರವಾಗಿದೆ ಅಂತ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.

ಈ ನಡುವೆ ಶಿಲ್ಪಾ ನಾಗ್ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ, ಅಂತಹ ನಿಷ್ಟಾವಂತ ಅಧಿಕಾರಿ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಇದೇ ವೇಳೆ ಅವರು ಸೋಮಶೇಖರ್ ಶಿಲ್ಪಾ ನಾಗ್ ಅವರ ರಾಜೀನಾಮೆಯನ್ನು ಯಾವುದೇ ಕಾರಭಕ್ಕೂ ಮಾಡಿಸೋದಿಲ್ಲ, ಅವರ ಲಿಮಿಟಟ್ ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಈ ವಿಚಾರವನ್ನು ಸಿಎಂ ಗಮನಕ್ಕೆ ತಂದಿದ್ದೇವೆ. ನಾಳೆ ಸಿ ಎಸ್ ರವಿಕುಮಾರ್ ಮೈಸೂರಿಗೆ ತೆರಳಿ ರಿವ್ಯೂ ಮಾಡಲಿದ್ದಾರೆ, ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img