Tuesday, June 15, 2021
Homeಸುದ್ದಿ ಜಾಲರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 18,324 ಮಂದಿಗೆ ಕೊರೊನಾ ಸೋಂಕು ಧೃಡ, 514 ಮಂದಿ ಬಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 18,324 ಮಂದಿಗೆ ಕೊರೊನಾ ಸೋಂಕು ಧೃಡ, 514 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿನ್ನೆಗಿಂತ ಇಂದು ಮತ್ತೆ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 18, 324 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಹೌದು. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 18324 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2653446 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 514 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 30531 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇವತ್ತು 24036 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 2336096 ಜನ ಗುಣಮುಖರಾಗಿದ್ದಾರೆ. 286798 ಸಕ್ರಿಯ ಪ್ರಕರಣಗಳು ಇವೆ.

ಬೆಂಗಳೂರಿನಲ್ಲಿ ಇಂದು 3533 ಜನರಿಗೆ ಸೋಂಕು ತಗಲಿದ್ದು, 347 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 1134384 ಸಕ್ರಿಯ ಪ್ರಕರಣಗಳಿದ್ದು, ಇಂದು 7622 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನೂ, ರಾಜ್ಯದಲ್ಲಿ ದಾಖಲಾಗ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್‌ 7 ರಿಂದ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್‌ ಮುಂದುವರೆಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ, ಕೊರೊ,ನಾ ಪ್ರಕರಣಗಳ ಇಳಿಕೆಗೆ ಇನ್ನಷ್ಟು ದಿನಗಳು ಕಠಿಣ ಕ್ರಮಗಳನ್ನ ಮುಂದುವರೆಸುವ ಆಗತ್ಯವಿದೆ. ಹಾಗಾಗಿ 7ರಿಂದ ಮತ್ತೆ ಒಂದು ವಾರಗಳ ಕಾಲ ಅಂದ್ರೆ ಜೂನ್‌ 14ರವರೆಗೆ ಲಾಕ್‌ಡೌನ್‌ ಮುಂದುವರೆಸಲಾಗುವುದು ಎಂದರು. ಇನ್ನು ಜೂನ್‌ 7ರಿಂದ ರಫ್ತು ಕೈಗಾರಿಕೆಗಳಿಗೆ 30ರಷ್ಟು ಅನುಮತಿ ನೀಡಲಾಗುವುದು ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img