Tuesday, June 15, 2021
Homeಸುದ್ದಿ ಜಾಲಮದುವೆಯಲ್ಲಿ ಹೆಂಡತಿಯ ಕಾಲಿಗೆ ಬಿದ್ದು ಕಣ್ಣೀರಿಟ್ಟ ಪತಿ!

ಇದೀಗ ಬಂದ ಸುದ್ದಿ

ಮದುವೆಯಲ್ಲಿ ಹೆಂಡತಿಯ ಕಾಲಿಗೆ ಬಿದ್ದು ಕಣ್ಣೀರಿಟ್ಟ ಪತಿ!

ನಮ್ಮ ಹಿಂದೂ ಧರ್ಮ ಹಾಗೂ ಧಾರ್ಮಿಕ ವಿಚಾರಣೆಗಳ ವಿಷಯಕ್ಕೆ ಬಂದಾಗ ಇಲ್ಲಿ ಪತಿ ಪತ್ನಿಯ ಸಂಬಂಧಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅದರಲ್ಲೂ ಮಹಿಳೆಯರು ತಮ್ಮ ಪತಿಯನ್ನೇ ತಮ್ಮ ದೈವ ಎಂದು ನಂಬಿದ್ದು,ಇಂದಿಗೂ ಅಂತಹ ಆಚರಣೆ ಮಾಡುವ ಅಸಂಖ್ಯಾತ ಮಹಿಳೆಯರು ನಮ್ಮ ದೇಶದಲ್ಲಿ ಇದ್ದಾರೆ. ಅಲ್ಲದೇ ಅನೇಕ ಮನೆತನಗಳಲ್ಲಿ ಇಂದಿಗೂ ಪತ್ನಿಯರು ತಮ್ಮ ಪತಿಯ ಹೆಸರನ್ನು ಹೇಳಲು ಕೂಡಾ ಹಿಂಜರಿಕೆ ತೋರುತ್ತಾರೆ. ಮಹಿಳೆಯರು ಪತಿಯೇ ದೇವರು ಎಂದು ಗೌರವಿಸುವ ಕಾರಣದಿಂದ ಮದುವೆಯ ದಿನ ಆಕೆ ತನ್ನ ಪತಿ ಹಾಗೂ ಹಿರಿಯರ ಆಶೀರ್ವಾದ ಪಡೆಯುವುದು ಸಹಜ. ಮದುವೆಯ ನಂತರವೂ ವಿಶೇಷ ಪೂಜೆ, ಆಚರಣೆಗಳು ಬಂದಾಗ ತಮ್ಮ ಗಂಡನ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾರೆ.

ಆದರೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಮದುವೆಯ ಫೋಟೋ ವೈರಲ್ ಆಗಿದ್ದು ಇದು ಎಲ್ಲರ ಗಮನ ಸೆಳೆದಿದೆ. ಈ ಫೋಟೋದಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವುದಾದರೆ, ಮದುವೆಯಲ್ಲಿ ವಧು ವರನ ಕಾಲಿಗೆ ನಮಸ್ಕಾರ ಮಾಡುವ ಬದಲು, ಇಲ್ಲಿ ವರನೇ ವಧುವಿನ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದಿದ್ದಾನೆ. ಆತ ಹೀಗೆ ಮಾಡಿರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ನಮ್ಮಲ್ಲಿ ಹಿರಿಯರು ಕಿರಿಯರ ಕಾಲಿಗೆ ನಮಸ್ಕಾರ ಮಾಡಿದರೆ ಅದೇ ಶ್ರೇಯಸ್ಕರವಲ್ಲ ಎಂದು ಹೇಳಲಾಗುತ್ತದೆ. ಅಂತಹುದರಲ್ಲಿ ಪತಿಯು ಪತ್ನಿಯ ಕಾಲಿಗೆ ನಮಸ್ಕರಿಸಿದರೆ ಜನಕ್ಕೆ ದಿಗ್ಬ್ರಮೆ ಆಗದೇ ಇರುತ್ತದೆಯೇ?

ಇನ್ನು ಈ ಘಟನೆಯ ನಂತರ ವರನನ್ನು ಆತ ಈ ರೀತಿ ಮಾಡಿದ್ದಾದರೂ ಏಕೆ ಎನ್ನುವ ಕಾರಣವನ್ನು ಕೇಳಿದಾಗ, ಆತನು ಹೇಳಿದ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಫೋಟೋಗೆ ಮೆಚ್ಚುಗೆಗಳು ಹರಿದು ಬಂದಿದೆ. ಹಾಗಾದರೆ ಆ ವರ ಹೇಳಿದ್ದಾದರೂ ಏನು ಎನ್ನುವುದನ್ನು ಒಮ್ಮೆ ತಿಳಿಯೋಣ ಬನ್ನಿ.

ವರನು,ಈಕೆ ನಮ್ಮ ಮನೆಯ ವಂಶಾವಳಿಯನ್ನು ಮುಂದುವರೆಸುವ ದೇವತೆಯಾಗಿದ್ದಾಳೆ ಎಂದು ಹೇಳುತ್ತಲೇ ಹೆಣ್ಣಿನ ಮಹತ್ವದ ಕುರಿತಾಗಿ ಎಲ್ಲರಿಗೂ ತಿಳಿಸಿದ್ದಾನೆ. ಹೆಣ್ಣು ಪ್ರತಿಯೊಂದು ಮನೆಯ ಭಾಗ್ಯಲಕ್ಷ್ಮಿಯಾಗಿರುವಳು, ಆಕೆ ನನಗೆ ತಂದೆಯಾಗುವ ಭಾಗ್ಯ ಕಲ್ಪಿಸುತ್ತಾಳೆ. ವೃದ್ಧರಾಗಿರುವ ನನ್ನ ತಂದೆ-ತಾಯಂದಿರನ್ನು ಕೊನೆಯವರೆಗೂ ಪೋಷಣೆ ಮಾಡುತ್ತಾಳೆ.

ತಾನು ಹುಟ್ಟಿದ ಮನೆಯನ್ನು ಬಿಟ್ಟು ಬಂದು, ಆಕೆ ತನ್ನ ಹೆತ್ತವರನ್ನು ತೊರೆದು ನಮ್ಮ ಮನೆ ಬೆಳಗಲು ಬರುವ ಭಾಗ್ಯ ದೇವತೆ. ತನ್ನ ಪ್ರೀತಿ ಪಾತ್ರರೊಡನೆ ಇದ್ದ ಸಂಬಂಧವನ್ನು ಕಡಿದುಕೊಂಡು ಹೊಸ ಸಂಬಂಧ ಬೆಸೆಯುತ್ತಿದ್ದಾಳೆ. ಆಕೆ ಹೆರಿಗೆಯ ಸಮಯದಲ್ಲಿ ನನ್ನ ಮಗುವಿಗಾಗಿ ಎಲ್ಲಾ ನೋವನ್ನು ನುಂಗಿ ಸಾವನ್ನು ಜಯಿಸಿ ಜನ್ಮ ನೀಡುತ್ತಾಳೆ. ಅದಕ್ಕೇ ತಾನೇ ಹೆರಿಗೆ ಎನ್ನುವುದು ಮಹಿಳೆಗೆ ಪುನರ್ಜನ್ಮ ಎನ್ನುವುದು, ಸೊಸೆ ಗಂಡನ ಮನೆಯ ಬೇರು, ಈಕೆಯ ನಡವಳಿಕೆಯ ಆಧಾರದ ಮೇಲೆಯೇ ಸಮಾಜ ನನ್ನನ್ನು ಗುರುತಿಸುತ್ತದೆ,‌ ಇಷ್ಟೆಲ್ಲಾ ಮಾಡುವ ದೇವತೆಯಾಗಿರುವ ಆಕೆಗೆ ಸ್ವಲ್ಪ ಗೌರವ ಕೊಟ್ಟರೆ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾ‌ನೆ.

ಅಲ್ಲದೇ ಹೆಣ್ಣಾದವಳೇ ಏಕೆ ಯಾವಾಗಲೂ ಏಕೆ ತಗ್ಗಿ ಬಗ್ಗಿ ನಡೆಯಬೇಕಬ ಸಂಪ್ರದಾಯ? ಆಕೆ ನನಗಾಗಿ ಇಷ್ಟೆಲ್ಲಾ ಮಾಡುತ್ತಿರುವಾಗ ಈ ಗೌರವ ಅತ್ಯಲ್ಪ ಎನ್ನುವ ಮಾತನ್ನು ವರ ಹೇಳಿದ್ದಾ‌ನೆ. ವರನ ಈ ಎಲ್ಲಾ ಮಾತುಗಳನ್ನು ಕೇಳಿ ಮದುವೆಯಲ್ಲಿ ನೆರಿದಿದ್ದವರು ಭಾವುಕರಾಗಿದ್ದಾರೆ. ಅಲ್ಲದೆ ಅವರನ್ನು ಹರಸುತ್ತಾ ಎಲ್ಲರಿಗೂ ನಿನ್ನಂಥ ಪತಿಯೇ ಸಿಗಲಪ್ಪ ಎಂದು ಬಾಯ್ತುಂಬ ಹರಿಸಿದ್ದಾರೆ ಹಿರಿಯರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img