Monday, June 14, 2021
Homeಸುದ್ದಿ ಜಾಲ71 ವರ್ಷಗಳಿಂದ ಸರೋವರ ಇದ್ದ ಜಾಗವನ್ನ ಕೃತಕವಾಗಿ ಒಣಗಿಸಿದಾಗ ಪತ್ತೆಯಾಯ್ತು ಐತಿಹಾಸಿಕ ನಗರ.! ಎಲ್ಲಿ ಗೊತ್ತಾ?

ಇದೀಗ ಬಂದ ಸುದ್ದಿ

71 ವರ್ಷಗಳಿಂದ ಸರೋವರ ಇದ್ದ ಜಾಗವನ್ನ ಕೃತಕವಾಗಿ ಒಣಗಿಸಿದಾಗ ಪತ್ತೆಯಾಯ್ತು ಐತಿಹಾಸಿಕ ನಗರ.! ಎಲ್ಲಿ ಗೊತ್ತಾ?

ಇಟಲಿಯ ಉತ್ತರಭಾಗದಲ್ಲಿರುವ ರೆಸಿಯ ಸರೋವರ ಇದೀಗ ಜನರ ಚರ್ಚೆಯ ವಿಷಯವಾಗಿದೆ ಅಂದ ಹಾಗೇ, ಈ ಸರೋವರವು ಹಿಮದಿಂದ ಆವೃತವಾದ ನೀರು ಹಾಗೂ ಅದರ ಮಧ್ಯೆ ಇರುವ 14ನೇ ಶತಮಾನದ ಚರ್ಚು ಗೋಪುರದಿಂದ ಆಗಿ ಸಾಕಷ್ಟು ಪ್ರಸಿದ್ಧವಾಗಿದೆ. ಆದರೆ ಈ ಸರೋವರದಲ್ಲಿ ದಶಕಗಳ ಹಿಂದೆ ಕಳೆದು ಹೋದಂತಹ ಹಳ್ಳಿಯೊಂದರ ಅವಶೇಷಗಳು ದೊರೆಯುವ ಮೂಲಕ ಇದೀಗ ಈ ಸರೋವರವು ಒಂದು ಚರ್ಚೆಯ ವಿಷಯವಾಗಿದೆ. ಹಲವು ವರ್ಷಗಳ ನಂತರ ಸರೋವರದ ಜಾಗದಲ್ಲಿ ದುರಸ್ತಿ ಕಾರ್ಯವನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಸರೋವರದ ನೀರನ್ನು ತಾತ್ಕಾಲಿಕವಾಗಿ ಒಣಗಿಸಲಾಗಿತ್ತು. ಹೀಗೆ ಸರೋವರದ ನೀರನ್ನು ಒಣಗುವಂತೆ ಮಾಡಿದ ಮೇಲೆ ದಶಕಗಳ ಹಿಂದೆ ಕಳೆದುಹೋದ ಗ್ರಾಮವೊಂದರ ಅವಶೇಷಗಳ ಚಿತ್ರಣ ಸರೋವರದಲ್ಲಿ ಕಾಣಿಸಿಕೊಂಡಿದೆ.

ಈ ಅವಶೇಷಗಳು ಜನರ ಮುಂದೆ ಬಂದ ಮೇಲೆ ಅದು ಅಲ್ಲಿನ ಜನರಲ್ಲಿ ಆಶ್ಚರ್ಯವನ್ನು ಮೂಡಿಸಿದೆ. ರೆಸಿಯಾ ಸರೋವರವನ್ನು ಜರ್ಮನ್ ಭಾಷೆಯಲ್ಲಿ ರೆಸ್ಚೆನ್ಸಿ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಟೈರಾಲ್‌ನ ಆಲ್ಪೈನ್ ಪ್ರದೇಶದಲ್ಲಿದೆ, ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್‌ನ ಗಡಿಯಲ್ಲಿದೆ. ಈ ಗ್ರಾಮದ ಕುರಿತಾಗಿ ಬಿಬಿಸಿ ವರದಿಯೊಂದನ್ನು ಮಾಡಿದ್ದು, ವರದಿಯ ಪ್ರಕಾರ 1950 ಕ್ಯೂರಾನ್ ಎನ್ನುವ ಹಳ್ಳಿಯು ಇಲ್ಲಿತ್ತು. ಅದು ನೀರಿನಲ್ಲಿ ಮುಳುಗುವ ಮೊದಲು ನೂರಾರು ಜನರಿಗೆ ಆಶ್ರಯವನ್ನು ನೀಡಿತ್ತು.

71 ವರ್ಷಗಳ ಹಿಂದೆ ಸರ್ಕಾರವು ಜಲ ವಿದ್ಯುತ್ ಸ್ಥಾವರದ ನಿರ್ಮಾಣದ ಉದ್ದೇಶದಿಂದ ಅಣೆಕಟ್ಟೊಂದನ್ನು ನಿರ್ಮಾಣ ಮಾಡಿದ್ದು ಆ ಸಂದರ್ಭದಲ್ಲಿ ಇಲ್ಲಿನ 2 ಸರೋವರಗಳನ್ನು ವಿಲೀನಗೊಳಿಸಲಾಯಿತು. ಇದರ ಪರಿಣಾಮವಾಗಿ ಕ್ಯೂರಾನ್ ಹಳ್ಳಿಯು ಸಂಪೂರ್ಣವಾಗಿ ಜಲಮಯವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. 1950 ರಲ್ಲಿ ಇಲ್ಲಿನ ಗ್ರಾಮದ ಜನರ ಆಕ್ಷೇಪಣೆಯ ಹೊರತಾಗಿಯೂ ಅಣೆಕಟ್ಟನ್ನು ನಿರ್ಮಾಣ ಮಾಡಲು ಹಾಗೂ ಎರಡು ಸರೋವರಗಳನ್ನು ವಿಲೀನಗೊಳಿಸಲು ಅಧಿಕಾರಿಗಳು ದೃಢವಾದ ನಿರ್ಧಾರವನ್ನು ಮಾಡಿದ್ದರು.

ನೂರಾರು ಜನರಿಗೆ ಆಶ್ರಯವನ್ನು ನೀಡಿದ್ದ ಗ್ರಾಮವು ನೀರಿನ ಅಡಿಯಲ್ಲಿ ಕಳೆದು ಹೋಯಿತು. ಸುಮಾರು 160 ಮನೆಗಳು ಸರೋವರದಲ್ಲಿ ವಿಲೀನವಾದವವು. ಆಗ ಗ್ರಾಮದಲ್ಲಿ ನೆಲೆಸಿದ್ದ ಜನರು ಬೇರೆ ದಾರಿಯಿಲ್ಲದೆ ಬೇರೆ ಬೇರೆ ಊರುಗಳಿಗೆ ಹೋದರೆ, ಒಂದಷ್ಟು ಜನರು ಹತ್ತಿರದ ಗ್ರಾಮಗಳಲ್ಲಿ ಹೊಸ ಜೀವನವನ್ನು ಕಟ್ಟಿಕೊಂಡರು.ಈ ಪ್ರದೇಶದ ಮೂಲವನ್ನು ಹೊಂದಿದೆ ವ್ಯಕ್ತಿಯೊಬ್ಬರು ಕೆಲವು ಫೋಟೋಗಳನ್ನು ಸೋಶಿಯಲ್ ಶೇರ್ ಮಾಡಿಕೊಂಡಿದ್ದಾರೆ.

ಹಳ್ಳಿಯ ಅವಶೇಷಗಳು ಇರುವ ಕಡೆ ನಡೆಯುವುದು ಒಂದು ಅನನ್ಯವಾದ ಭಾವನೆ ಎಂದು ಬರೆದುಕೊಂಡಿದ್ದಾರೆ. ಈ ಗ್ರಾಮದ ಕುರಿತಾಗಿ ಈಗಾಗಲೇ ವೆಬ್ ಸಿರೀಸ್ ಕೂಡ ಸಿದ್ಧವಾಗಿದೆ. ಅಲ್ಲದೇ ಈ ಗ್ರಾಮದ ವಿಷಯವಾಗಿ ಪುಸ್ತಕ ಕೂಡ ಬಿಡುಗಡೆಯಾಗಿದೆ. ಈ ಪ್ರದೇಶವು ಮೊದಲು ಆಸ್ಟ್ರಿಯಾದ ಭಾಗವಾಗಿತ್ತು ಆದರೆ ಮೊದಲ ವಿಶ್ವ ಯುದ್ಧದ ನಂತರ ದಕ್ಷಿಣ ಟೈರಾಲ್ ಗೆ ಸೇರಿದ್ದು, ಮೊದಲು ಇಲ್ಲಿನ ಭಾಷೆಯು ಜರ್ಮನ್ ಆಗಿತ್ತು ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img