Tuesday, June 15, 2021
Homeದಕ್ಷಿಣ ಕನ್ನಡಮಂಗಳೂರುವೃದ್ದಶ್ರಮಕ್ಕೆ ರೂ.1 ಲಕ್ಷ ದೇಣಿಗೆ ನೀಡುವ ಮೂಲಕ ವಿಶಿಷ್ಠವಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳು

ಇದೀಗ ಬಂದ ಸುದ್ದಿ

ವೃದ್ದಶ್ರಮಕ್ಕೆ ರೂ.1 ಲಕ್ಷ ದೇಣಿಗೆ ನೀಡುವ ಮೂಲಕ ವಿಶಿಷ್ಠವಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳು

ಮಂಗಳೂರು :  ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಪುಷ್ಪಾವತಿ ಮತ್ತು ಶ್ರೀಯುತ  ಶ್ರೀನಿವಾಸ್ ರವರು ತಮ್ಮ 42ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ವೃದ್ದಶ್ರಮಕ್ಕೆ  ದೇಣಿಗೆ ನೀಡುವ ಮೂಲಕ ವಿಶಿಷ್ಠವಾಗಿ ಆಚರಿಸಿದ್ದಾರೆ.

ದಂಪತಿಗಳು ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಶ್ರೀ ಸಭಾದ ಪುತ್ತೂರಿನ ” ಶಿವಸದನ ” ವೃದ್ದಶ್ರಮಕ್ಕೆ ರೂ. 1, 00,000.(ಒಂದು  ಲಕ್ಷ ) ದೇಣಿಗೆಯನ್ನು ನೀಡಿ ಅರ್ಥ ಪೂರ್ಣವಾಗಿ  ಆಚರಿಸಿದ್ದಾರೆ.

ಇವರ ಈ ಕೊಡುಗೆಯನ್ನು ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಕರುಣಾಕರ ಬೆಳ್ಳೆ,  ಸಂತೋಷ ಕುಮಾರ್ ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ ಕುಮಾರ್  ಉಪಾಧ್ಯಕ್ಷೆ ಸ್ನೇಹ ಲತಾ ದಿವಾಕರ  ಇವರು ಸ್ವೀಕರಿಸಿದರು.

ಇದೇ ವೇಳೆ ದಂಪತಿಗಳು ವಿವಾಹ  ವಾರ್ಷಿಕೋತ್ಸವ ದಿನವನ್ನು ಹಾರ  ಬದಲಾಯಿಸಿ, ರಾಗಿ ಹಾಲುಬಾಯಿ ಕಟ್ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಸುನಿಲ್ ಕೃಷ್ಣಾಪುರ

ವಿ ನ್ಯೂಸ್ 24

ಮಂಗಳೂರು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img