Tuesday, June 15, 2021
Homeಸುದ್ದಿ ಜಾಲಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ!

ಇದೀಗ ಬಂದ ಸುದ್ದಿ

ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ!

ಮುಂಬೈ: ಪ್ರಸಿದ್ಧ ಯೂಟ್ಯೂಬರ್​ ಒಬ್ಬ ಪ್ರೀತಿಸಿ ಮದುವೆಯಾದ ಒಂದೂವರೆ ತಿಂಗಳಿನಲ್ಲೇ ಆತನ ಪತ್ನಿ ಆತ್ಮಹತ್ಯಗೆ ಶರಣಾಗಿದ್ದಾಳೆ. ಇದೀಗ ಯೂಟ್ಯೂಬರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಮುಂಬೈ ಮೂಲದ ಯೂಟ್ಯೂಬರ್​ ಜಿತೇಂದ್ರ ಅಗರ್​ವಾಲ್(26)​ ಕೋಮಲ್​ (23) ಹೆಸರಿನ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಏಪ್ರಿಲ್​ನಲ್ಲಿ ಮನೆ ಬಿಟ್ಟು ಓಡಿ ಹೋದ ಜೋಡಿ, ಏಪ್ರಿಲ್​ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅದಾದ ನಂತರ ಸಂಸಾರದಲ್ಲಿ ಸಾಕಷ್ಟು ಜಗಳವೂ ಆಗಿದೆಯಂತೆ.

ಸಂಸಾರದಲ್ಲಿ ಸುಖ ಕಾಣದ ಕೋಮಲ್​ ಇತ್ತೀಚೆಗೆ ಮನೆಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಚಾರವಾಗಿ ಆಕೆಯ ತಾಯಿ ಮತ್ತು ಸಹೋದರಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರು ನೀಡಿದ್ದಾರೆ. ಮಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಯುವತಿ ಮನೆಯವರು ನೀಡಿರುವ ದೂರಿದನ ಆಧಾರದಲ್ಲಿ ಜಿತೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಜಿತೇಂದ್ರ ಜೀತು ಜಾನ್​ ಹೆಸರಿನಲ್ಲಿ ಯೂಟ್ಯೂಬ್​ ಚಾನಲ್​ ಹೊಂದಿದ್ದು 2.8 ಲಕ್ಷಕ್ಕೂ ಅಧಿಕ ಸಬ್​ಸ್ಕ್ರೈಬರ್​ ಅನ್ನು ಹೊಂದಿದ್ದಾನೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img